ನವದೆಹಲಿ: ದೇಶದಲ್ಲಿ ಸತತ 30ನೇ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 101.84 ರೂ.ಗೆ ಮಾರಾಟ ಆಗುತ್ತಿದೆ. ಡೀಸೆಲ್ ಲೀಟರ್‌ಗೆ 89.87 ರೂಪಾಯಿ ಇದೆ. ಕಳೆದೊಂದು ತಿಂಗಳಿಂದ ತೈಲ ಬೆಲೆ ಏರಿಕೆಯಾಗಿರುವುದು ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ವಾಹನ ಸವಾರು ಹಾಗೂ ಜನ ಸಾಮಾನ್ಯರಿಗೆ ಕೊಂಚ ರಿಲೀಫ್ ನೀಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಈಗ ಬ್ಯಾರೆಲ್‌ಗೆ 70 ಡಾಲರ್‌ಗೆ ಇಳಿದಿದೆ. ಈ ಹಿಂದೆ ಬ್ಯಾರೆಲ್‌ಗೆ 77 ಡಾಲರ್ ವರೆಗೆ ಏರಿಕೆಯ ವೇಗವನ್ನು ಪಡೆದುಕೊಂಡಿತ್ತು. ಕೆಲವೇ ದಿನಗಳಲ್ಲಿ ಮತ್ತೆ ಕಚ್ಚಾ ತೈಲ ಬ್ಯಾರೆಲ್‌ಗೆ 70 ಡಾಲರ್‌ಗಿಂತ ಕಡಿಮೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗದಿರುವುದು ಇತರೆ ಉತ್ಪನ್ನಗಳ ಬೆಲೆಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ನೆರವಾಗುತ್ತಿದೆ. ಇದರಿಂದ ಗ್ರಾಹಕರಿಗೂ ಅನುಕೂಲವಾಗುತ್ತದೆ.
ಇದನ್ನೂ ಓದಿ: ಅಬಕಾರಿ ಸುಂಕ ಕಡಿತ : ತಮಿಳುನಾಡಿನಲ್ಲಿ 100 ಗಡಿಯಿಂದ ಕೆಳಗಿಳಿದ ಪೆಟ್ರೋಲ್ ದರ
ಜುಲೈ 18 ರಿಂದ ಇಂಧನದ ಬೆಲೆ ಸ್ಥಿರವಾಗಿದೆ. ಮುಂಬೈನಲ್ಲಿ ಮೇ 29 ರಂದು ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100 ರೂ.ಗಳ ಗಡಿ ದಾಟಿತ್ತು. ಸದ್ಯ ದೇಶದ ವಾಣಿಜ್ಯ ನಗರಿಯಲ್ಲಿ ಇಂಧನ ಬೆಲೆ ಪ್ರತಿ ಲೀಟರ್‌ಗೆ 107.83 ರೂ. ಹಾಗೂ ಡೀಸೆಲ್ ಲೀಟರ್‌ಗೆ 97.45 ರೂ ಆಗಿದೆ, ಇದು ಮಹಾನಗರಗಳಲ್ಲೇ ಅತಿ ಹೆಚ್ಚಾಗಿದೆ. ಎಲ್ಲಾ ಮಹಾನಗರಗಳಲ್ಲೂ ಈಗ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ.ದಾಟಿದೆ. ಚೆನ್ನೈನಲ್ಲಿ 102.49 ರೂ., ಕೋಲ್ಕತ್ತಾದಲ್ಲಿ 101.08 ರೂ., ಎರಡೂ ನಗರಗಳಲ್ಲಿ ಡೀಸೆಲ್ ಲೀಟರ್‌ಗೆ ಕ್ರಮವಾಗಿ 94.39 ಮತ್ತು 93.02 ರೂಪಾಯಿ ಇದೆ.