ನವದೆಹಲಿ: ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿದೆ.
ಕಳೆದ ಕೆಲವು ದಿನಗಳಿಂದ ಮೇಲ್ಮುಖವಾಗಿ ಸಾಗುತ್ತಿದ್ದ ಚಿಲ್ಲರೆ ಇಂಧನ ದರವು ಶುಕ್ರವಾರದ ಪೇಟೆಯಲ್ಲಿ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ 11-13 ಪೈಸೆ ಹಾಗೂ ಡೀಸೆಲ್ನಲ್ಲಿ 15-16 ಪೈಸೆಯಷ್ಟು ಇಳಿಕೆಯಾಗಿದೆ. ಕಳೆದ ತಿಂಗಳಿಂದ ಗಗನ ಮುಖಿಯಾಗಿದ್ದ ಇಂಧನವು ಈಗ ಕೆಳಮುಖವಾಗಿದೆ.
ಕಳೆದ ಅಕ್ಟೋಬರ್ 2ರಿಂದ ಇಲ್ಲಿಯವರೆಗೆ ಲೀಟರ್ ಪೆಟ್ರೋಲ್ ಮೇಲೆ 1.14 ರೂ. ಹಾಗೂ ಡೀಸೆಲ್ ಮೇಲೆ 84 ಪೈಸೆಯಷ್ಟು ಇಳಿದಂತಾಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ 80 ರೂ. ದೊರೆಯುತ್ತಿದ್ದು, ಇಲ್ಲಿನ ವಾಹನ ಚಾಲಕ ಮತ್ತು ಮಾಲೀಕರಿಗೆ ಕೊಂಚ ನಿರಾಳ ಸಿಕ್ಕಂತಾಗಿದೆ. ದೇಶದ ಪ್ರಮುಖ ಮೆಟ್ರೋ ನಗರಗಳ ಪೈಕಿ ಬೆಂಗಳೂರಿನಲ್ಲಿ ಅತಿ ಕಡಿಮೆ ದರದಲ್ಲಿ ಡೀಸೆಲ್ (₹ 68.82) ಮಾರಾಟ ಆಗುತ್ತಿದೆ.
ರಾಷ್ಟ್ರರಾಜಧಾನಿ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಹಾಗೂ ಬೆಂಗಳೂರುನಲ್ಲಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ₹ 73.42 & ₹ 66.60, ₹ 79.03 & 69.81, ₹ 76.07 & ₹ 68.96, 76.25 & ₹ 70.35 ಹಾಗೂ ₹ 75.87 & ₹ 68.82 ಮಾರಾಟ ಆಗುತ್ತಿದೆ.