ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಎರಡು ತಿಂಗಳ ವಿರಾಮದ ನಂತರ ಸತತ ಎರಡನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆ ಏರಿಕೆ ಮಾಡಿವೆ.
ಪೆಟ್ರೋಲ್ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್‌ಗೆ 15 ಪೈಸೆ ಹೆಚ್ಚಳದಿಂದ 81.38 ರೂ.ಗೆ ಏರಿದೆ. ಡೀಸೆಲ್‌ನ ಚಿಲ್ಲರೆ ದರ ದೆಹಲಿಯಲ್ಲಿ ಲೀಟರ್‌ಗೆ 20 ಪೈಸೆ ಏರಿಕೆಯಾಗಿ 70.88 ರೂ.ಗೆ ತಲುಪಿದೆ.
ಬೆಲೆ ಪರಿಷ್ಕರಣೆಯೊಂದಿಗೆ ಎರಡೂ ಇಂಧನಗಳ ಚಿಲ್ಲರೆ ಬೆಲೆ ದೇಶಾದ್ಯಂತ ಹೆಚ್ಚಿಸಲಾಗಿದೆ. ಆದರೆ, ರಾಜ್ಯಗಳು ಅನುಸರಿಸುತ್ತಿರುವ ನಾನಾ ವಿಧದ ತೆರಿಗೆ ರಚನೆಯಿಂದಾಗಿ ನಗರಗಳಲ್ಲಿ ಹೆಚ್ಚಳದ ಮಟ್ಟವು ಭಿನ್ನವಾಗಿದೆ.
ಶೀಘ್ರದಲ್ಲೇ ಕೊರೊನಾ ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾದ ಬಗ್ಗೆ ಸಕಾರಾತ್ಮಕ ಸುದ್ದಿಗಳ ಹರಿದಾಡಿದ ಬಳಿಕ ಜಾಗತಿಕ ತೈಲ ಮಾರುಕಟ್ಟೆಯು ಸದೃಢತೆಯ ಲಕ್ಷಣಗಳು ತೋರಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳ ನಿರೀಕ್ಷಿಸಲಾಗಿದೆ. ಗ್ರಾಹಕ ಮಾರುಕಟ್ಟೆಗಳಲ್ಲಿ ತೈಲದ ಬೇಡಿಕೆ ಮತ್ತು ದಾಸ್ತಾನು ಮಟ್ಟ ಕುಸಿಯುತ್ತಿವೆ. ಬ್ರೆಂಟ್ ಕಚ್ಚಾ ಬೆಲೆ ಪ್ರತಿ ಬ್ಯಾರೆಲ್‌ಗೆ 45 ಡಾಲರ್ನಷ್ಟಿದೆ. ಆದರೆ, ಅಮೆರಿಕದ ಡಬ್ಲ್ಯುಟಿಐ ಕಚ್ಚಾ ತೈಲ ಬ್ಯಾರೆಲ್‌ಗೆ 42 ಡಾಲರ್ಗಿಂತ ಹೆಚ್ಚಿದೆ.
ಶುಕ್ರವಾರ ಮತ್ತು ಶನಿವಾರ ವಾಹನ ಇಂಧನ ದರ ಹೆಚ್ಚಳ ಸೂಚನೆಯು ಮುಂದಿನ ವಾರದಲ್ಲಿ ಎರಡು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕ್ರಮೇಣ ಹೆಚ್ಚಾಗಬಹುದು ಎಂದು ಒಎಂಸಿ ಮೂಲಗಳು ತಿಳಿಸಿವೆ.