ಮುಂಬೈ: ತೈಲ ಕಂಪನಿಗಳು ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿವೆ. ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್ ಬೆಲೆಯಲ್ಲಿ ತಲಾ 15 ಪೈಸೆ ಇಳಿಕೆಯಾಗಿದೆ.
ಇದನ್ನೂ ಓದಿ: ವಾಹನ ಸವಾರರಿಗೆ ಸಿಹಿ ಸುದ್ದಿ: 35 ದಿನಗಳ ಬಳಿಕ ಇಳಿಕೆ ಕಂಡ Petrol, Diesel ದರ
ಬೆಲೆ ಪರಿಷ್ಕರಣೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 101.49 ರೂಪಾಯಿ ಹಾಗೂ ಡೀಸೆಲ್ ಲೀಟರ್‌ಗೆ 88.92 ರೂಪಾಯಿಯಲ್ಲಿ ಮಾರಾಟ ಮಾಡಲಾಗುತ್ತಿದೆ.
ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 14 ಪೈಸೆ ಕಡಿತದ ಬಳಿಕ 107.52 ರೂ.ಗೆ ಇಳಿಸಲಾಗಿದೆ. ಡೀಸೆಲ್ ಬೆಲೆಯಲ್ಲಿ 16 ಪೈಸೆ ತಗ್ಗಿಸಲಾಗಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲೀಟರ್‌ಗೆ ಕ್ರಮವಾಗಿ 11 ಮತ್ತು 15 ಪೈಸೆ ಇಳಿಕೆ ಕಂಡಿವೆ. ಪರಿಷ್ಕರಣೆಯೊಂದಿಗೆ ಒಂದು ಲೀಟರ್ ಪೆಟ್ರೋಲ್ 101.82 ರೂಪಾಯಿ ಹಾಗೂ ಡೀಸೆಲ್ 91.98 ಕ್ಕೆ ಮಾರಾಟವಾಗುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 105.13 ರೂಪಾಯಿ ಹಾಗೂ ಡೀಸೆಲ್ 94.49 ರೂಪಾಯಿಗೆ ಸೇಲ್ ಆಗುತ್ತಿದೆ.
ಇದನ್ನೂ ಓದಿ: ವಾಹನ ಸವಾರರಿಗೆ ಸಿಹಿ ಸುದ್ದಿ.. ಈ ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ಟ್ಯಾಕ್ಸ್ ಕಡಿತ!
ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಮಾರುಕಟ್ಟೆ ಕಂಪನಿಗಳು ಬೆಲೆ ಪರಿಷ್ಕರಿಸಿವೆ. ಹೊಸ ಬೆಲೆಯನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಜಾರಿಗೆ ತರಲಾಗುತ್ತದೆ. ರಾಜ್ಯಗಳು ಮತ್ತು ನಗರಗಳು ವಿಭಿನ್ನ ಇಂಧನ ಬೆಲೆಗಳನ್ನು ಹೊಂದಿವೆ. ಏಕೆಂದರೆ ಮೌಲ್ಯವರ್ಧಿತ ತೆರಿಗೆಗಳು, ಸ್ಥಳೀಯ ಮತ್ತು ಸರಕು ಶುಲ್ಕಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ವಿಭಿನ್ನವಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ತೈಲ ಬೆಲೆಗಳಲ್ಲಿ ಬದಲಾವಣೆ ಆಗುತ್ತದೆ. ಇನ್ನು ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರಲ್‌ಗೆ 65.61 ಡಾಲರ್ ಇದೆ.