ನವದೆಹಲಿ: ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಮೇ ತಿಂಗಳಲ್ಲಿ ಪ್ಯಾಸೆಂಜರ್ ವೆಹಿಕಲ್ ರಿಟೈಲ್ ಮಾರಾಟವು ಶೇ 86.97ರಷ್ಟು ಕುಸಿತ ಕಂಡಿದ್ದು, 30,749 ಯುನಿಟ್‌ಗಳಿಗೆ ತಲುಪಿದೆ ಎಂದು ಆಟೋಮೊಬೈಲ್ ವಿತರಕರ ಸಂಸ್ಥೆ ಎಫ್‌ಎಡಿಎ ತಿಳಿಸಿದೆ.
1,435 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) 1,225 ಕಚೇರಿಗಳಿಂದ ವಾಹನ ನೋಂದಣಿ ಡೇಟಾವನ್ನು ಸಂಗ್ರಹಿಸಿದ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್‌ಎಡಿಎ) ಪ್ಯಾಸೆಂಜರ್ ವೆಹಿಕಲ್ ಮಾರಾಟವು 2019ರ ಮೇ ತಿಂಗಳಲ್ಲಿ 2,35,933 ಯುನಿಟ್‌ಗಳಷ್ಟಿತ್ತು ಎಂದಿದೆ.
ದ್ವಿಚಕ್ರ ವಾಹನ ಮಾರಾಟವು ಶೇ. 88.8ರಷ್ಟು ಕುಸಿದಿದ್ದು, 1,59,039ಕ್ಕೆ ತಲುಪಿದೆ. 2019ರ ಮೇ ತಿಂಗಳಲ್ಲಿ 14,19,842 ಯುನಿಟ್ ಇತ್ತು.
ಕಳೆದ ವರ್ಷದ ಇದೇ ತಿಂಗಳಲ್ಲಿ 80,392 ಯುನಿಟ್ ವಾಣಿಜ್ಯ ವಾಹನಗಳ ಮಾರಾಟವಾಗಿದ್ದವು. ಇದೀಗ ಶೇಕಡಾ 96.63ರಷ್ಟು ಇಳಿಕೆಯಾಗಿ 2,711 ಯುನಿಟ್ಗೆ ತಲುಪಿದೆ.
ತ್ರಿಚಕ್ರ ವಾಹನ ಮಾರಾಟವು ಕಳೆದ ತಿಂಗಳು ಶೇ 96.34ರಷ್ಟು ಕುಸಿದು 1,881 ಯುನಿಟ್ಗೆ ತಲುಪಿದೆ. ಕಳೆದ ವರ್ಷ 51,430 ಯುನಿಟ್ ಮಾರಾಟವಾಗಿತ್ತು.