ETV Bharat / business

ಪ್ರವಾಹ ತಂದಿಟ್ಟ ಸಂಕಷ್ಟ: ಗಗನಕ್ಕೇರಿದ ಉಳ್ಳಾಗಡ್ಡಿ ಬೆಲೆ - ಈರುಳ್ಳಿ ಬೆಲೆಯಲ್ಲಿ ಏರಿಕೆ

ಈರುಳ್ಳಿ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಜನರ ಕಣ್ಣಲ್ಲಿ ನೀರು ತರಿಸಿದರೂ ಸಹ ಪ್ರವಾಹದಿಂದಾಗಿ ಬೆಳೆಗಳನ್ನು ಕಳೆದುಕೊಂಡಿರುವ ರೈತರಿಗೆ ಈ ದರದಲ್ಲಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ.

Onion prices continue to surge in different parts of India
ಗಗನಕ್ಕೇರಿದ ಉಳ್ಳಾಗಡ್ಡಿ ಬೆಲೆ
author img

By

Published : Oct 24, 2020, 3:38 PM IST

ಹೈದರಾಬಾದ್​: ಭೀಕರ ಮಳೆ, ಪ್ರವಾಹದ ಪರಿಣಾಮವಾಗಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

ಈ ರಾಜ್ಯಗಳಲ್ಲಿ ಈರುಳ್ಳಿ ದರ 100 ರಿಂದ 150 ರೂ.ಗೆ ಏರಿಕೆಯಾಗಿದೆ. ಇದು ಬಡ ಹಾಗೂ ಮಧ್ಯಮ ವರ್ಗದ ಜನರ ಕಣ್ಣಲ್ಲಿ ನೀರು ತರಿಸಿದರೂ ಸಹ ಪ್ರವಾಹದಿಂದಾಗಿ ಬೆಳೆಗಳನ್ನು ಕಳೆದುಕೊಂಡಿರುವ ರೈತರಿಗೆ ಇಷ್ಟೊಂದು ದರದಲ್ಲಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ.

  • Maharashtra: Onion prices continue to surge in the state; visuals from a wholesale vegetable market in Nashik.

    "The rise in onion prices is temporary. It is the result of the heavy crop damage that farmers have suffered due to rainfall this year," says a seller. pic.twitter.com/FVxCRKYgnU

    — ANI (@ANI) October 24, 2020 " class="align-text-top noRightClick twitterSection" data=" ">

"ಈರುಳ್ಳಿ ಬೆಲೆಯಲ್ಲಿ ಏರಿಕೆ, ಇದು ತಾತ್ಕಾಲಿಕವಾಗಿದೆ. ಈ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ರೈತರ ಬೆಳೆಗಳೆಲ್ಲಾ ನಾಶವಾಗಿದ್ದು, ಇದರ ಪರಿಣಾಮವಾಗಿ ಬೆಲೆ ಏರಿಕೆಯಾಗಿದೆ ಎಂದು" ಮಹಾರಾಷ್ಟ್ರದ ನಾಸಿಕ್​​ನಲ್ಲಿ ವ್ಯಾಪಾರಿಯೊಬ್ಬರು ಹೇಳುತ್ತಾರೆ. ದೇಶದ ಈರುಳ್ಳಿ ಉತ್ಪನ್ನಗಳಲ್ಲಿ ಶೇ.50 ರಷ್ಟನ್ನು ಮಹಾರಾಷ್ಟ್ರದಲ್ಲೇ ಬೆಳೆಯಲಾಗುತ್ತದೆ.

"ಅತಿವೃಷ್ಠಿಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿದೆ. ಹೀಗಾಗಿ ನಾವು ಮಹಾರಾಷ್ಟ್ರದಿಂದ ಕೆ.ಜಿ ಈರುಳ್ಳಿಗೆ 70-80 ರೂಪಾಯಿಯಂತೆ ಆಮದು ಮಾಡಿಕೊಂಡು ಇಲ್ಲಿ 80-90 ರೂಪಾಯಿಗೆ ಮಾರಾಟ ಮಾಡುತ್ತಿದ್ದೇವೆ" ಎಂದು ಶಿವಮೊಗ್ಗದ ಈರುಳ್ಳಿ ವ್ಯಾಪಾರಿಯೊಬ್ಬರು ಹೇಳಿದರು.

  • Karnataka: Onion prices remain higher than usual, visuals from a market in Shivamogga.

    "Excess rains have damaged onion produce so we are getting it from Maharashtra. This has inflated prices. Today wholesale price is around Rs. 70-80 & retail price is Rs 80-90," says a seller. pic.twitter.com/shU97NHRAU

ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರ ದಾಸ್ತಾನಿಗೆ ಮಿತಿ ಹೇರಿದೆ. ಸಗಟು ಮಾರಾಟದಾರರು 25 ಮೆಟ್ರಿಕ್ ಟನ್ ವರೆಗೆ ಹಾಗೂ ಚಿಲ್ಲರೆ ಮಾರಾಟಗಾರರು 2 ಟನ್‌ ತನಕ ಮೆಟ್ರಿಕ್ ಟನ್ ವರೆಗೆ ಮಾತ್ರ ಈರುಳ್ಳಿಯನ್ನು ಸಂಗ್ರಹಿಸಿಟ್ಟುಕೊಳ್ಳಬಹುದೆಂದು ಕೇಂದ್ರ ನಿನ್ನೆ ಅಧಿಸೂಚನೆ ಹೊರಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.