ನವದೆಹಲಿ: ಕೊರೊನಾ ವೈರಸ್ ಅನ್ನು ನಿಯಂತ್ರಿಸಲು ರಾಷ್ಟ್ರವ್ಯಾಪಿ ದಿಗ್ಬಂಧನ ಹಾಕಿದ ಬಳಿಕ ಸಕ್ಕರೆ ಮಾರಾಟದ ಕುಸಿತವು ಸಕ್ಕರೆ ಉದ್ಯಮದಲ್ಲಿ ನಗದು ಬಿಕ್ಕಟ್ಟು ಸೃಷ್ಟಿಸಿದೆ. ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಿರುವ ಬಾಕಿ ಹಣ ಹಾಗೆಯೇ ಉಳಿದುಕೊಂಡಿದೆ.
ಭಾರತೀಯ ಸಕ್ಕರೆ ಕಾರ್ಖಾನೆ ಸಂಘದ (ಇಸ್ಮಾ) ಪ್ರಕಾರ, ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಕೊಡಬೇಕಾದ ಬಾಕಿ 18,000 ಕೋಟಿ ರೂ. ಉಳಿಸಿಕೊಂಡಿವೆ. ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಸಕ್ಕರೆ ಮಾರಾಟ 10 ಲಕ್ಷ ಟನ್ ಇಳಿಕೆಯಾಗಿದೆ ಎಂದಿದೆ.
ಸಕ್ಕರೆ ಅಗತ್ಯ ಸರಕುಗಳ ವಿಭಾಗದಲ್ಲಿ ಬರುತ್ತದೆ. ಆದ್ದರಿಂದ ಸಕ್ಕರೆ ಉದ್ಯಮದ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರಿಲ್ಲ. ಆದರೆ, ದೊಡ್ಡ ಖರೀದಿದಾರರಿಂದ ಬೇಡಿಕೆಯ ಕೊರತೆಯಿಂದಾಗಿ ಸಕ್ಕರೆ ಮಾರಾಟವು ಗಮನಾರ್ಹವಾಗಿ ಕುಸಿದಿದೆ ಎಂದು ಇಸ್ಮಾ ಮಹಾನಿರ್ದೇಶಕ ಅವಿನಾಶ್ ವರ್ಮಾ ಹೇಳಿದ್ದಾರೆ.
ಸಕ್ಕರೆ ಅತ್ಯಗತ್ಯ ಸರಕು ಆಗಿದ್ದು, ಉತ್ಪಾದನೆ ಮತ್ತು ಮಾರಾಟವನ್ನು ಮುಂದುವರಿಸಲು ನೆರವಾಗಿದೆ. ಆದ್ದರಿಂದ ಸಕ್ಕರೆ ಉದ್ಯಮದ ಮೇಲೆ ಯಾವುದೇ ದೊಡ್ಡ ಪರಿಣಾಮವಿಲ್ಲ. ಆದರೆ, ದುರ್ಬಲ ಬೇಡಿಕೆಯಿಂದಾಗಿ ನಗದು ಬಿಕ್ಕಟ್ಟಿನಂತಹ ಸಮಸ್ಯೆಗಳು ನಿವಾರಣೆ ಆಗದೆ ಉಳಿದಿವೆ ಎಂದರು.
ಕನಿಷ್ಠ ಬೇಡಿಕೆಯಿಂದಾಗಿ ಹಣದ ಒಳಹರಿವಿನ ಮೇಲೆ ಪರಿಣಾಮ ಬೀರಿದೆ. ದೇಶದ ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಉತ್ತರ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬಿನ ಬೆಲೆಯನ್ನು ರೈತರಿಗೆ ನೀಡಲು ಸಾಧ್ಯವಾಗಿಲ್ಲ ಎಂದರು.
ಕಳೆದ ಒಂದೂವರೆ ತಿಂಗಳಲ್ಲಿ ನಮಗೆ ಸಕ್ಕರೆ ಮಾರಾಟ ಮಾಡುವಲ್ಲಿ ಸಮಸ್ಯೆಗಳಿವೆ. ಪಾನೀಯ, ಐಸ್ ಕ್ರೀಮ್, ಕೇಕ್, ಬೇಕರಿ, ಜ್ಯೂಸ್ ಉತ್ಪಾದಕರಂತಹ ದೊಡ್ಡ ಪ್ರಮಾಣದ ಸಕ್ಕರೆ ಖರೀದಿದಾರರ ಬೇಡಿಕೆ ಕಡಿಮೆಯಾಗಿದೆ ಎಂದರು.