ಕ್ಯಾಲಿಫೋರ್ನಿಯಾ: ಆ್ಯಪಲ್ ಸಂಸ್ಥೆ ನೂತನ ಐಪೋನ್ 11 ಇಂದು ಬಿಡುಗಡೆ ಮಾಡಲಿದ್ದು, ಇದಕ್ಕೂ ಮುನ್ನ ಈ ಮೊಬೈಲ್ಗಳ ಬೆಲೆ ರಿವೀಲ್ ಆಗಿದೆ.
ಕ್ಯಾಲಿಫೋರ್ನಿಯಾ ಸ್ಟೀವ್ ಜಾಬ್ಸ್ ಥಿಯೇಟರ್ನಲ್ಲಿ ಭಾರತೀಯ ಕಾಲಮಾನ ರಾತ್ರಿ 10.30ಕ್ಕೆ ನೂತನ ಐಫೋನ್ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಮೂರು ನೂತನ ಮೊಬೈಲ್ ಈ ವೇಳೆ ರಿಲೀಸ್ ಆಗಲಿವೆ.
ಐಫೋನ್ 11, ಐಫೋನ್ 11 ಪ್ರೋ ಹಾಗೂ ಐಪೋನ್ 11 ಪ್ರೋ ಮ್ಯಾಕ್ಸ್ ಹೆಸರಿನ ಮೂರು ಮೊಬೈಲ್ಗಳು ಇಂದು ಬಿಡುಗಡೆಗೊಳ್ಳಲಿವೆ.
![iPhone](https://etvbharatimages.akamaized.net/etvbharat/prod-images/4394874_t.jpg)
ಐಫೋನ್ 11 ಬೆಲೆ ಇಂತಿದೆ:
ಐಫೋನ್ 11 ಮೊಬೈಲ್ 64 ಜಿಬಿ ಆಂತರಿಕ ಸಾಮರ್ಥ್ಯದ ಮೊಬೈಲ್ಗೆ ₹53,000 ಇರಲಿದ್ದು, 128ಜಿಬಿ ಹಾಗೂ 256 ಜಿಬಿ ಆಂತರಿಕ ಸಾಮರ್ಥ್ಯದ ಮೊಬೈಲ್ಗೆ ಕ್ರಮವಾಗಿ ₹57,500 ಹಾಗೂ ₹64,600 ಬೆಲೆ ಇರಲಿದೆ.
ಐಫೋನ್ 11 ಪ್ರೋ ಬೆಲೆ ಇಂತಿದೆ:
ಐಫೋನ್ 11 ಪ್ರೋ 128ಜಿಬಿ ಆಂತರಿಕ ಸಾಮರ್ಥ್ಯದಿಂದ ದೊರೆಯಲಿದ್ದು ₹72,000 ಬೆಲೆ ಇರಲಿದೆ ಎಂದು ತಿಳಿದು ಬಂದಿದೆ. 256ಜಿಬಿ ಹಾಗೂ 512 ಜಿಬಿ ಆಂತರಿಕ ಸಾಮರ್ಥ್ಯಸ ಮೊಬೈಲ್ ಬೆಲೆ ಕ್ರಮವಾಗಿ ₹79,000 ಹಾಗೂ ₹ 86,200 ಬೆಲೆ ಇರಲಿದೆ ಎಂದಿದೆ.
ಐಫೋನ್ 11 ಪ್ರೋ ಮ್ಯಾಕ್ಸ್ ಇಂತಿದೆ:
128ಜಿಬಿ ಆಂತರಿಕ ಸಾಮರ್ಥ್ಯದ ಮೊಬೈಲ್ ಬೆಲೆ ₹79,000 ಬೆಲೆ ಇದ್ದರೆ, 256ಜಿಬಿ ಹಾಗೂ 512 ಆಂತರಿಕ ಸಾಮರ್ಥ್ಯದ ಮೊಬೈಲ್ ಬೆಲೆ ಕ್ರಮವಾಗಿ ₹86,200 ಹಾಗೂ ₹ 93,435 ಇರಲಿದೆ ಎನ್ನಲಾಗಿದೆ.