ETV Bharat / business

ಮೋದಿ ಗತ್ತು, ಸೀತಾರಾಮನ್ ತಾಕತ್ತು: 43 ವರ್ಷಗಳಿಂದ ಆಗದ್ದು ಜಸ್ಟ್ 32 ದಿನಗಳಲ್ಲಿ ಫಿನಿಶ್​! - ಸೆನ್ಸೆಕ್ಸ್ ಸರ್ವಕಾಲಿಕ ಗರಿಷ್ಠ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2ನೇ ಅವಧಿಗೆ ಗೆಲುವು ದಾಖಲಿಸಿದಾಗ ಮೊದಲ ಬಾರಿಗೆ 40,000 ಹೆಗ್ಗುರುತನ್ನು ಮೀರಿತು. ಇದರ ವಿಶೇಷವೆಂದರೆ, 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಸೆನ್ಸೆಕ್ಸ್ ದ್ವಿಗುಣಗೊಂಡಿತು. ಕಡಿಮೆ ಅವಧಿಯಲ್ಲಿ ಸೆನ್ಸೆಕ್ಸ್ 45,000 ಅಂಕದಿಂದ 50,000ಕ್ಕೆ ಏರಿತು. ಈ ಸಾಧನೆಯನ್ನು ಅಳೆಯಲು ಸೂಚ್ಯಂಕ 35 ಸೆಷನ್‌ಗಳನ್ನು ತೆಗೆದುಕೊಂಡಿತು. ಸೆನ್ಸೆಕ್ಸ್‌ನ ಕೊನೆಯ 5,000 ಅಂಕಗಳ ಗಳಿಕೆ ಕೇವಲ 32 ವಹಿವಾಟು ಅವಧಿಗಳಲ್ಲಿ ದಾಖಲಿಸಿದೆ. ಇದೇ ಅಂಕ ಗಳಿಸಲು ಸೆನ್ಸೆಕ್ಸ್ 1978ರಿಂದ 2021ರ ತನಕ 43 ವರ್ಷಗಳನ್ನು ತೆಗೆದುಕೊಂಡಿದೆ.

Sensex
Sensex
author img

By

Published : Jan 21, 2021, 2:12 PM IST

ನವದೆಹಲಿ: ಬಿಎಸ್ಇ ಸೆನ್ಸೆಕ್ಸ್ ಗುರುವಾರ ಮೊದಲ ಬಾರಿಗೆ 50,000 ಅಂಕಗಳ ಗಡಿ ರೇಖೆ ಮುರಿದು ಗಮನಾರ್ಹ ಮೈಲಿಗಲ್ಲು ಸಾಧಿಸಿದೆ.

ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಮಾರ್ಚ್ ಅಂತ್ಯದಲ್ಲಿ ಸೆನ್ಸೆಕ್ಸ್ ಅತ್ಯಂತ ಕಡಿಮೆ ದಾಖಲೆಯ ಮಟ್ಟದಲ್ಲಿ ಸತತವಾಗಿ ಕುಸಿತ ಕಂಡಿತ್ತು. ತೀರ ಕನಿಷ್ಠ ಮಟ್ಟದಿಂದ ಚೇತರಿಕೆ ಕಂಡ ಬಿಎಸ್ಇ ಮತ್ತು ಎನ್ಎಸ್ಇ ಎರಡೂ ಸೂಚ್ಯಂಕಗಳು ಅಂತಿಮವಾಗಿ 2020ರ ಕ್ಯಾಲೆಂಡರ್ ವರ್ಷವನ್ನು ಸಕರಾತ್ಮಕವಾಗಿ ಕೊನೆಗಳಿಸಿದವು. ಈ ಅವಧಿಯಲ್ಲಿ ಸೆನ್ಸೆಕ್ಸ್ ಸುಮಾರು ಶೇ 16ರಷ್ಟು ಏರಿಕೆಯಾಯಿತು.

1986ರಲ್ಲಿ ರಚಿಸಲಾದ ಸೆನ್ಸೆಕ್ಸ್ ಭಾರತದ ಅತ್ಯಂತ ಹಳೆಯ ಸ್ಟಾಕ್ ಸೂಚ್ಯಂಕವಾಗಿದೆ. ಇದನ್ನು ಮುಂಬೈ ಷೇರು ಸೂಚ್ಯಂಕದಲ್ಲಿ (ಬಿಎಸ್ಇ) ಅತಿದೊಡ್ಡ ಮತ್ತು ಹೆಚ್ಚು ಸಕ್ರಿಯ ವಹಿವಾಟು ನಡೆಸುವ 30 ಷೇರುಗಳನ್ನು ಒಳಗೊಂಡಿದೆ.

ಸೂಚ್ಯಂಕವನ್ನು 100ರ ಮೂಲ ಬೆಲೆಯೊಂದಿಗೆ 1978-79ರಲ್ಲಿ ಪ್ರಾರಂಭಿಸಲಾಯಿತು. ಸೆನ್ಸೆಕ್ಸ್ ಎಂಬ ಪದವನ್ನು ಷೇರು ಮಾರುಕಟ್ಟೆ ವಿಶ್ಲೇಷಕ ದೀಪಕ್ ಮೊಹೋನಿ ಅವರು ನೀಡಿದ್ದರು. ಇದು ಸೆನ್ಸೆಟಿವ್- ಸೂಕ್ಷ್ಮ (sensitive) ಮತ್ತು ಇಂಡೆಕ್ಸ್​ 'ಸೂಚ್ಯಂಕ' ('index) ಪದಗಳ ಮಿಶ್ರಣವಾಗಿದೆ.

ಪ್ರಾರಂಭವಾದ ಬಳಿಕ ಮಾರುಕಟ್ಟೆ ಬಂಡವಾಳೀಕರಣವನ್ನು ತೂಕದ ವಿಧಾನ ಆಧರಿಸಿ ಸೆನ್ಸೆಕ್ಸ್ ಲೆಕ್ಕಹಾಕಲಾಗುತ್ತಿತ್ತು. 2003ರ ಸೆಪ್ಟೆಂಬರ್​ನಿಂದ ಫ್ರೀ-ಫ್ಲೋಟ್ ಕ್ಯಾಪಿಟಲೈಸೇಶನ್ ವಿಧಾನ (ಮುಕ್ತ ಹರಿವ ಬಂಡವಾಳ) ಆಧರಿಸಿ ಇದನ್ನು ಲೆಕ್ಕಹಾಕಲಾಗುತ್ತಿದೆ.

30 ಷೇರುಗಳ ಸೂಚ್ಯಂಕವು 1991ರಲ್ಲಿ ಭಾರತ ಅಳವಡಿಸಿಕೊಂಡ ಎಲ್​ಪಿಜಿ ನೀತಿಯ ಬಳಿಕ ಅಗಾಧವಾದ ಬೆಳವಣಿಗೆ ಕಂಡಿತು. ಇದು 2000ರ ಮುಂಚಿನ ಆರಂಭದಲ್ಲಿ 5,000 ಅಂಕಗಳಿಂದ ಶುರುವಾಗಿ 2021ರ ಜನವರಿಯಲ್ಲಿ 50,000 ಅಂಕಗಳಿಗೆ ಬಂದು ನಿಂತಿದೆ.

2014ರ ಮೇ 16ರಂದು ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಎನ್‌ಡಿಎ ಸರ್ಕಾರವು ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಆಗ ಸೆನ್ಸೆಕ್ಸ್​ 24,000 ಅಂಕಗಳಷ್ಟಿತ್ತು. ಇದು 35,000 ಅಂಕಗಳಿಗೆ ಏರಲು 4 ವರ್ಷ ತೆಗೆದುಕೊಂಡಿತು.

ಇದನ್ನೂ ಓದಿ: ರಿಲಯನ್ಸ್​- ಫ್ಯೂಚರ್ ಡೀಲ್ ಪರಿಶೀಲನೆ ಹಿಂದಕ್ಕೆ ಪಡೆದ ಬಿಎಸ್​​ಇ: ಆಸ್ತಿ ಮಾರಾಟಕ್ಕೆ ಸೆಬಿ ಅಸ್ತು

ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2ನೇ ಅವಧಿಗೆ ಗೆಲುವು ದಾಖಲಿಸಿದಾಗ ಮೊದಲ ಬಾರಿಗೆ 40,000 ಹೆಗ್ಗುರುತನ್ನು ಮೀರಿತು. ಇದರ ವಿಶೇಷವೆಂದರೆ, 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಸೆನ್ಸೆಕ್ಸ್ ದ್ವಿಗುಣಗೊಂಡಿತು. ಕಡಿಮೆ ಅವಧಿಯಲ್ಲಿ ಸೆನ್ಸೆಕ್ಸ್ 45,000 ಅಂಕದಿಂದ 50,000ಕ್ಕೆ ಏರಿತು. ಈ ಸಾಧನೆಯನ್ನು ಅಳೆಯಲು ಸೂಚ್ಯಂಕ 35 ಸೆಷನ್‌ಗಳನ್ನು ತೆಗೆದುಕೊಂಡಿತು. ಸೆನ್ಸೆಕ್ಸ್‌ನ ಕೊನೆಯ 5,000 ಅಂಕಗಳ ಗಳಿಕೆ ಕೇವಲ 32 ವಹಿವಾಟು ಅವಧಿಗಳಲ್ಲಿ ದಾಖಲಿಸಿದೆ. ಇದೇ ಅಂಕ ಗಳಿಸಲು ಸೆನ್ಸೆಕ್ಸ್ 1978ರಿಂದ 2021ರ ತನಕ 43 ವರ್ಷಗಳನ್ನು ತೆಗೆದುಕೊಂಡಿದೆ.

ಕೊರೊನಾ ಸಾಂಕ್ರಾಮಿಕವು ಹಬ್ಬುವಿಕೆ ತಡೆಯಲು ರಾಷ್ಟ್ರವ್ಯಾಪಿ ಲಾಕ್​ಡೌನ್ ಘೋಷಿಸಿದ ಸರ್ಕಾರ, ತೀವ್ರ ಮಾರಾಟದ ಒತ್ತಡಕ್ಕೆ ಮಣಿದು 2020ರ ಮಾರ್ಚ್ ಕೊನೆಯಲ್ಲಿ ಸೆನ್ಸೆಕ್ಸ್ ಪ್ರಪಾತಕ್ಕೆ ಬಿತ್ತು. ಮಾರುಕಟ್ಟೆಗಳು ದೊಡ್ಡ ಮಟ್ಟದಲ್ಲಿ ಪುನರಾಗಮನ ನಡೆಸಿ ಕೇವಲ 10 ತಿಂಗಳಲ್ಲಿ ಶೇ 91ರಷ್ಟು ಜಿಗಿದು 50,000 ಅಂಕಗಳ ಗಡಿದಾಟಿದೆ.

ಬಿಎಸ್‌ಇ ಪಟ್ಟಿಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣ (ಎಂ-ಕ್ಯಾಪ್) ಈಗ 200 ಲಕ್ಷ ಕೋಟಿ ರೂ.ಯಷ್ಟಾಗಿದೆ. ಇದು ದೇಶದ ಎಂ-ಕ್ಯಾಪ್ ಅನ್ನು ಜಿಡಿಪಿ ಅನುಪಾತಕ್ಕೆ ಸಮಾನತೆಯ ಹತ್ತಿರ ತಂದು ನಿಂತಿದೆ. ಎಂ-ಕ್ಯಾಪ್; ವೈಯಕ್ತಿಕ ಷೇರುಗಳ ಬೆಲೆಯು ವಿತರಣೆಯ ಒಟ್ಟು ಷೇರುಗಳ ಸಂಖ್ಯೆಯಿಂದ ಗುಣಿಸಿ ಲೆಕ್ಕಹಾಕಲಾಗುತ್ತದೆ.

ಭಾರತವು 2020ರಲ್ಲಿ ಸುಮಾರು 22.5 ಬಿಲಿಯನ್ ಅಥವಾ ಈಕ್ವಿಟಿಗಳಲ್ಲಿ 1.7 ಲಕ್ಷ ಕೋಟಿ ರೂ. ಎಫ್‌ಐಐ ಪಡೆದುಕೊಂಡಿದೆ. ಈ ತಿಂಗಳು ಇಲ್ಲಿಯವರೆಗೆ ನಿವ್ವಳ ಎಫ್‌ಐಐ ಒಳಹರಿವು 20,098.53 ಕೋಟಿ ರೂ.ಯಷ್ಟಾಗಿದೆ. ಎನ್‌ಎಸ್‌ಡಿಎಲ್ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ವಿದೇಶಿ ಬಂಡವಾಳ ಹೂಡಿಕೆಯ (ಎಫ್‌ಪಿಐ) ನಿವ್ವಳ ಒಳಹರಿವು 2.38 ಲಕ್ಷ ಕೋಟಿ ರೂ.ಯಷ್ಟಾಗಿದೆ. ಇದು ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಎಫ್‌ಪಿಐ ಒಳಹರಿವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.