ETV Bharat / business

ಕಾರು ಪ್ರಿಯರಿಗೆ ಶಾಕಿಂಗ್!: ಹೊಸ ವರ್ಷದಿಂದ ಈ ಕಾರುಗಳು ದರದಲ್ಲಿ ಭಾರಿ ಏರಿಕೆ - ಎಂಜಿ ಮೋಟಾರ್ ಇತ್ತೀಚಿನ ಸುದ್ದಿ

ಎಂಜಿ ಮೋಟಾರ್ ಇಂಡಿಯಾ ತನ್ನ ವಿವಿಧ ವೆಚ್ಚಗಳ ಹೆಚ್ಚಳವನ್ನು ಗಮನದಲ್ಲಿ ಇರಿಸಿಕೊಂಡು ತನ್ನ ಉತ್ಪನ್ನ ವ್ಯಾಪ್ತಿಯಲ್ಲಿ ಬೆಲೆ ಪರಿಷ್ಕರಣೆ ಕೈಗೊಳ್ಳಲಿದೆ. ಇತರ ವಾಹನ ತಯಾರಕರಾದ ಮಾರುತಿ ಸುಜುಕಿ ಇಂಡಿಯಾ, ಫೋರ್ಡ್ ಇಂಡಿಯಾ, ಮಹೀಂದ್ರಾ ಅಂಡ್ ಮಹೀಂದ್ರಾ ಮತ್ತು ಹೀರೋ ಮೊಟೊಕಾರ್ಪ್ ಸಹ ಇನ್ಪುಟ್ ವೆಚ್ಚಗಳದಿಂದಾಗಿ ಜನವರಿಯಿಂದ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ತಿಳಿಸಿವೆ.

car
ಕಾರು
author img

By

Published : Dec 18, 2020, 3:41 PM IST

ನವದೆಹಲಿ: ತಯಾರಿಕಾ ವೆಚ್ಚ ಸರಿದೂಗಿಸಲು ಜನವರಿಯಿಂದ ತನ್ನ ವಾಹನಗಳ ಬೆಲೆಯಲ್ಲಿ ಶೇ ಮೂರು ರಷ್ಟು ಹೆಚ್ಚಿಸುವುದಾಗಿ ಎಂಜಿ ಮೋಟಾರ್ ಇಂಡಿಯಾ ತಿಳಿಸಿದೆ.

ಮುಂದಿನ ತಿಂಗಳು ತನ್ನ ಹೆಕ್ಟರ್ ಪ್ಲಸ್ ಮಾದರಿಯ ಏಳು ಆಸನಗಳ ಆವೃತ್ತಿಯನ್ನು ಪರಿಚಯಿಸುವುದಾಗಿ ಕಂಪನಿ ತಿಳಿಸಿದೆ.

ಎಂಜಿ ಮೋಟಾರ್ ಇಂಡಿಯಾ ತನ್ನ ವಿವಿಧ ವೆಚ್ಚಗಳ ಹೆಚ್ಚಳವನ್ನು ಗಮನದಲ್ಲಿ ಇರಿಸಿಕೊಂಡು ತನ್ನ ಉತ್ಪನ್ನ ವ್ಯಾಪ್ತಿಯಲ್ಲಿ ಬೆಲೆ ಪರಿಷ್ಕರಣೆ ಕೈಗೊಳ್ಳಲಿದೆ. ಬೆಲೆ ಹೆಚ್ಚಳವು ಮಾಡಲ್​ಗಳನ್ನು ಅವಲಂಬಿಸಿ ಶೇ 3ರವರೆಗೆ ಇರಲಿದೆ. ಪರಿಷ್ಕೃತ ದರವು 2021ರ ಜನವರಿ 1ರಿಂದ ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೃಷಿ ಕಾಯ್ದೆಗಳನ್ನು ರಾತ್ರೋರಾತ್ರಿ ಪರಿಚಯಿಸಿಲ್ಲ, 20-30 ವರ್ಷ ಚರ್ಚಿಸಿದ್ದೇವೆ: ವಿಪಕ್ಷಗಳಿಗೆ ನಮೋ ತಿರುಗೇಟು

ಎಂಜಿ ಮೋಟಾರ್ ಇಂಡಿಯಾ ಪ್ರಸ್ತುತ ಭಾರತದಲ್ಲಿ ಮೂರು ಮಾದರಿಗಳನ್ನು ಮಾರಾಟ ಮಾಡುತ್ತದೆ. ಹೆಕ್ಟರ್, ಝ್ಯಡ್ಎಸ್ ಇವಿ ಮತ್ತು ಗ್ಲೋಸ್ಟರ್. ಇವುಗಳ ಬೆಲೆ 12.83 ಲಕ್ಷದಿಂದ 35.6 ಲಕ್ಷ ರೂ. ತನಕ ಇದೆ. ಇತರ ವಾಹನ ತಯಾರಕರಾದ ಮಾರುತಿ ಸುಜುಕಿ ಇಂಡಿಯಾ, ಫೋರ್ಡ್ ಇಂಡಿಯಾ, ಮಹೀಂದ್ರಾ ಅಂಡ್ ಮಹೀಂದ್ರಾ ಮತ್ತು ಹೀರೋ ಮೊಟೊಕಾರ್ಪ್ ಸಹ ಇನ್ಪುಟ್ ವೆಚ್ಚಗಳದಿಂದಾಗಿ ಜನವರಿಯಿಂದ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.