ಮುಂಬೈ: ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಸೂಚನೆ ಮತ್ತು ವಿದೇಶಿ ನಿಧಿಯ ಒಳಹರಿವಿನ ಮಧ್ಯೆ ಸೂಚ್ಯಂಕದ ಹೆವಿವೇಯ್ಟ್ ಷೇರುಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ, ಒಎನ್‌ಜಿಸಿ ಮತ್ತು ಆಕ್ಸಿಸ್ ಬ್ಯಾಂಕ್ ಲಾಭದೊಂದಿಗೆ ಆರಂಭ ಕಂಡಿದ್ದ ಪರಿಣಾಮ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 250 ಅಂಕ ಏರಿಕೆಯಾಗಿದೆ.
ಸೆನ್ಸೆಕ್ಸ್ ತನ್ನ ಜೀವಿತಾವಧಿಯ ಮಧ್ಯಂತರ ವಹಿವಾಟಿನ ವೇಳೆ ಗರಿಷ್ಠ 44,358.71 ಅಂಕ ಮುಟ್ಟಿದೆ. 30-ಷೇರುಗಳ ಬಿಎಸ್‌ಇ ಸೂಚ್ಯಂಕವು ಆರಂಭಿಕ ಅವಧಿಯಲ್ಲಿ 271.48 ಅಂಕ ಅಥವಾ ಶೇ 0.62ರಷ್ಟು ಏರಿಕೆಯಾಗಿ 44,348.63 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
ಕೊರೊನಾ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟನ್ನು ಭಾರತ ಅವಕಾಶವನ್ನಾಗಿ ಪರಿವರ್ತಿಸಿದೆ: ನಿರ್ಮಲಾ ಸೀತಾರಾಮನ್
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಮೊದಲ ಬಾರಿಗೆ 13,000 ಅಂಕಗಳ ಗಡಿ ಮುಟ್ಟಿದ್ದು, 76.65 ಅಂಕ ಅಥವಾ ಶೇ 0.59ರಷ್ಟು ಏರಿಕೆ ಕಂಡು 13,003.10 ಅಂಕದಲ್ಲಿ ವಹಿವಾಟು ನಿರತವಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಶೇ 1.60 ರಷ್ಟು ಏರಿಕೆ ಕಂಡಿದ್ದು ಮಾರುತಿ, ಒಎನ್‌ಜಿಸಿ, ಆಕ್ಸಿಸ್ ಬ್ಯಾಂಕ್, ಎಲ್&ಟಿ, ಟೈಟಾನ್, ಐಸಿಐಸಿಐ ಬ್ಯಾಂಕ್ ಮತ್ತು ಪವರ್‌ಗ್ರಿಡ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ ಬಜಾಜ್ ಆಟೋ, ನೆಸ್ಲೆ ಇಂಡಿಯಾ, ಇನ್ಫೋಸಿಸ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಕುಸಿತ ದಾಖಲಿಸಿವೆ.
ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 194.90 ಅಂಕ ಅಥವಾ ಶೇ 0.44ರಷ್ಟು ಹೆಚ್ಚಳವಾಗಿ 44,077.15 ಅಂಕಗಳಿಗೆ ತಲುಪಿತು. ನಿಫ್ಟಿ 67.40 ಅಂಕ ಅಥವಾ ಶೇ 0.52ರಷ್ಟು ಏರಿಕೆ ಕಂಡು 12,926.45ಕ್ಕೆ ತಲುಪಿತು.
ತಾತ್ಕಾಲಿಕ ವಿನಿಮಯ ಮಾಹಿತಿಯ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 4,738.44 ಕೋಟಿ ರೂ. ಷೇರು ಖರೀದಿಸಿದ್ದರು. ಟೋಕಿಯೊ, ಹಾಂಗ್ ಕಾಂಗ್ ಮತ್ತು ಸಿಯೋಲ್‌ನಲ್ಲಿನ ಪೇಟೆಗಳು ಮಧ್ಯಂತರ ಸೆಷನ್ನಲ್ಲಿ ಲಾಭ ಗಳಿಸುತ್ತಿದ್ದರೆ, ಶಾಂಘೈ ಕೆಂಪು ಬಣ್ಣದಲ್ಲಿ ಮುಂದುವರಿದಿದೆ.