ETV Bharat / business

ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ ; ಮುಂದಿನ ವಾರ ಅಡುಗೆ ಸಿಲಿಂಡರ್‌ ಬೆಲೆ 100 ರೂ.ಏರಿಕೆ!? - ಎಲ್‌ಪಿಜಿ

ಪ್ರಸ್ತುತ ಅಡುಗೆ ಅನಿಲ ಸಿಲಿಂಡರ್‌ಗೆ ದೆಹಲಿ ಮತ್ತು ಮುಂಬೈನಲ್ಲಿ 899.50 ರೂ., ಕೋಲ್ಕತ್ತಾದಲ್ಲಿ 926 ರೂ. ಮತ್ತು ಹೈದರಾಬಾದ್‌ನಲ್ಲಿ 952 ರೂಪಾಯಿ ಇದೆ. ಇಂದು ಬೆಳಗ್ಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಲೀಟರ್‌ಗೆ 35 ಪೈಸೆ ಹೆಚ್ಚಿಸಲಾಗಿತ್ತು..

LPG price may be hiked next week; petrol, diesel rates up again
ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ; ಮುಂದಿನ ವಾರ ಅಡುಗೆ ಸಿಲಿಂಡರ್‌ ಬೆಲೆ 100 ರೂ.ಏರಿಕೆ!
author img

By

Published : Oct 27, 2021, 6:30 PM IST

ನವದೆಹಲಿ : ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಅಡುಗೆ ಅನಿಲ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿರುವ ನಡುವೆಯೇ ಮತ್ತೆ ಬೆಲೆ ಏರಿಕೆಯ ಬಿಸಿ ಎದುರಿಸಬೇಕಾಗಿದೆ.

ಮುಂದಿನ ವಾರ ಅಡುಗೆ ಅನಿಲದ ಸಿಲಿಂಡರ್ ಬೆಲೆ ಭಾರೀ ಏರಿಕೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ 100 ರೂ.ಗಳಷ್ಟು ಹೆಚ್ಚಿಸಬೇಕು. ಆದರೆ, ದರ ಹೆಚ್ಚಳವು ಸರ್ಕಾರದ ಅನುಮೋದನೆಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ.

ಸರ್ಕಾರವು ಬೆಲೆ ಏರಿಕೆಗೆ ಅನುಮತಿ ನೀಡಿದರೆ, ಇದು ಈ ವರ್ಷ ಅಡುಗೆ ಅನಿಲದ ಮೇಲೆ ಐದನೇ ಹೆಚ್ಚಳವಾಗಲಿದೆ. ತೈಲ ಕಂಪನಿಗಳು ಕೊನೆಯದಾಗಿ ಅಕ್ಟೋಬರ್ 6 ರಂದು 14.2 ಕೆಜಿಯ ಎಲ್‌ಪಿಜಿ ಸಿಲಿಂಡರ್‌ಗೆ 15 ರೂ. ಹಾಗೂ ಜುಲೈನಲ್ಲಿ 90 ರೂಪಾಯಿ ಹೆಚ್ಚಿಸಿದ್ದವು.

ಅಂತಾರಾಷ್ಟ್ರೀಯ ಇಂಧನ ಬೆಲೆಗಳ ತೀವ್ರ ಏರಿಕೆಯ ಹಿನ್ನೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ ಸುಮಾರು 100 ರೂಪಾಯಿ ಹೆಚ್ಚಳವಾಗಲಿದೆ. ಸೌದಿ ಅರೇಬಿಯಾದಲ್ಲಿ ಎಲ್‌ಪಿಜಿ ಬೆಲೆ ಈ ತಿಂಗಳು ಶೇ.60 ರಷ್ಟು ಏರಿಕೆಯಾಗಿ 1 ಟನ್‌ಗೆ 800 ಡಾಲರ್‌ಗೆ ತಲುಪಿದೆ. ಕಚ್ಚಾ ತೈಲವು ಬ್ಯಾರೆಲ್‌ಗೆ 85.42 ಡಾಲರ್‌ನಷ್ಟಿದೆ. ಸರ್ಕಾರ ಎಲ್‌ಪಿಜಿ ಚಿಲ್ಲರೆ ಬೆಲೆಗಳನ್ನು ನಿಯಂತ್ರಿಸುತ್ತಿದೆ.

ಕಳೆದ ವರ್ಷ ಸರ್ಕಾರ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರಗಳನ್ನು ಏರಿಸುವ ಮೂಲಕ ಸಬ್ಸಿಡಿಯನ್ನು ತೆಗೆದು ಹಾಕಿದೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್‌ನಂತೆ ಎಲ್‌ಪಿಜಿ ದರಗಳ ನಿಯಂತ್ರಣವನ್ನು ಅದು ಅಧಿಕೃತವಾಗಿ ಘೋಷಿಸಿಲ್ಲ. ಸರ್ಕಾರ ಸಬ್ಸಿಡಿ ಭರಿಸಲು ಇಚ್ಛಿಸದಿದ್ದರೆ ಚಿಲ್ಲರೆ ಬೆಲೆ ಏರಿಕೆಯಾಗುತ್ತದೆ. ಇದರಿಂದ ಗ್ರಾಹಕರ ಮೇಲೆ ಸಂಪೂರ್ಣ ಹೊರೆ ಬೀಳುತ್ತದೆ.

ಪ್ರಸ್ತುತ ಅಡುಗೆ ಅನಿಲ ಸಿಲಿಂಡರ್‌ಗೆ ದೆಹಲಿ ಮತ್ತು ಮುಂಬೈನಲ್ಲಿ 899.50 ರೂ., ಕೋಲ್ಕತ್ತಾದಲ್ಲಿ 926 ರೂ. ಮತ್ತು ಹೈದರಾಬಾದ್‌ನಲ್ಲಿ 952 ರೂಪಾಯಿ ಇದೆ. ಇಂದು ಬೆಳಗ್ಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಲೀಟರ್‌ಗೆ 35 ಪೈಸೆ ಹೆಚ್ಚಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.