ನವದೆಹಲಿ: ಸತತ ನಾಲ್ಕನೇ ಬಾರಿಯೂ ಎಲ್ಪಿಜಿ ಸಿಲಿಂಡರ್ ದರದಲ್ಲಿ ಹೆಚ್ಚಳ ಕಂಡುಬಂದಿದ್ದು, 14.2 ಕೆಜಿ ಸಿಲಿಂಡರ್ ಮೇಲೆ ₹ 13.50 ಏರಿಕೆಯಾಗಿದೆ.
ಇಂಡಿಯನ್ ಆಯಿಲ್ ಕಂಪನಿಯ ಪ್ರಕಾರ, ಭಾರತದಾದ್ಯಂತ ನಿತ್ಯ 30 ಲಕ್ಷ ಸಿಲಿಂಡರ್ ವಿತರಣೆ ಆಗುತ್ತಿದೆ. 14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್ ಈಗ ದೆಹಲಿಯಲ್ಲಿ 695 ರೂ.ಗೆ ಲಭ್ಯವಾಗುತ್ತಿದೆ. ಮುಂಬೈಯಲ್ಲಿ ₹ 665, ಚೆನ್ನೈನಲ್ಲಿ ₹ 714 ಮತ್ತು ಕೋಲ್ಕತ್ತಾದಲ್ಲಿ ₹ 725ಗೆ ಮಾರಾಟ ಆಗುತ್ತಿದೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಪ್ರತಿ ತಿಂಗಳ ಮೊದಲ ದಿನದಿಂದ ಬೆಲೆಗಳನ್ನು ಬದಲಾವಣೆ ಮಾಡುತ್ತಾರೆ.
ನವೆಂಬರ್ನಲ್ಲಿ ಸುಮಾರು ₹ 76 ಹೆಚ್ಚಳ ಆಗಿದ್ದರೆ ಅಕ್ಟೋಬರ್ ಮತ್ತು ಸೆಪ್ಟೆಂಬರ್ನಲ್ಲಿ ತಲಾ ₹ 15ರಷ್ಟು ಏರಿಕೆಯಾಗಿದೆ. ಈ ತಿಂಗಳು 13.50 ರೂ. ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಾನದಂಡದ ಎಲ್ಪಿಜಿ ಮತ್ತು ಡಾಲರ್ ಹಾಗೂ ರೂಪಾಯಿ ವಿನಿಮಯ ದರದ ಮೇಲೆ ಬೆಲೆ ನಿರ್ಧಾರವಾಗುತ್ತದೆ.
ಭಾರತದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಇಂಡಿಯನ್ ಆಯಿಲ್ ಇತ್ತೀಚೆಗೆ ಪ್ರತಿ ಬಾರಿ ಪುನರ್ರ್ಭರ್ತಿ ಮಾಡುವಾಗ ಎಲ್ಪಿಜಿ ಸಿಲಿಂಡರ್ಗೆ ಪೂರ್ವ ವಿತರಣಾ ತಪಾಸಣೆ ನಡೆಸುವಂತೆ ಗ್ರಾಹಕರನ್ನು ಕೇಳಿಕೊಂಡಿತ್ತು. ಈ ತಪಾಸಣೆಯಲ್ಲಿ ಸಿಲಿಂಡರ್ ತೂಕ, ಒ-ರಿಂಗ್ ಸೋರಿಕೆಯ ಪರಿಶೀಲನೆ, ವಾಲ್ ಸೋರಿಕೆಯಂತಹ ಪರಿಶೀಲನೆಗಳು ಇದರಲ್ಲಿ ಸೇರಿವೆ.