ಮುಂಬೈ: ಸಕಾರಾತ್ಮಕ ಜಾಗತಿಕ ಸೂಚನೆಗಳು, ಆರೋಗ್ಯಕರ ತ್ರೈಮಾಸಿಕ ಫಲಿತಾಂಶಗಳ ನಿರೀಕ್ಷೆ ಮತ್ತು ಆಶಾವಾದದ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಭಾರತದ ಬಾರೋಮೀಟರ್ ಸೂಚ್ಯಂಕ ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್‌ನ ಏರಿಕೆ ಗುರುವಾರದ ಆರಂಭಿಕ ವಹಿವಾಟಿನಂದು 50,000 ಅಂಕಗಳ ಗಡಿ ದಾಟಿದೆ.
ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣವಾದ ಒಂದು ದಿನದ ನಂತರ, ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ ತನ್ನ ಏಷ್ಯಾದ ಸಹವರ್ತಿಗಳಿಗೆ ಸಕರಾತ್ಮಕ ಸಂದೇಶ ರವಾನಿಸಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಸೆನ್ಸೆಕ್ಸ್‌ನ ಕೊನೆಯ 5,000 ಅಂಕಗಳ ಗಳಿಕೆ ಕೇವಲ 32 ವಹಿವಾಟು ಅವಧಿಗಳಲ್ಲಿ ದಾಖಲಿಸಿದೆ. ಮಧ್ಯಾಹ್ನ 12.30ರ ಸುಮಾರಿಗೆ 30-ಷೇರುಗಳ ಸೆನ್ಸೆಕ್ಸ್ 50,107.10 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಇದು 314 ಅಂಕಗಳಷ್ಟು ಏರಿಕೆಯಾಗಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ) ನಿಫ್ಟಿ 50 ಸಹ ಹೊಸ ದಾಖಲೆಯ ಗರಿಷ್ಠ 14,738.30 ಅಂಕಗಳಿಗೆ ಮುಟ್ಟಿದೆ. 14,732.60 ಅಂಕಗಳಲ್ಲಿ ವಹಿವಾಟು ನಡೆಸುತ್ತಿದ್ದು, ಹಿಂದಿನ ಕ್ಲೋಸ್‌ಗಿಂತ 87.85 ಅಂಕ ಹೆಚ್ಚಾಗಿದೆ.
ಷೇರು ಮಾರುಕಟ್ಟೆ ಏರಿಕೆಗೆ ಕಾರಣಗಳು
ಅಮೆರಿಕದ ಹೊಸ ಅಧ್ಯಕ್ಷ ಜೋ ಬೈಡನ್ ಅವರಿಂದ ಹೆಚ್ಚಿನ ಆರ್ಥಿಕ ಪ್ರಚೋದನೆಯನ್ನು ಹೂಡಿಕೆದಾರರು ನಿರೀಕ್ಷಿಸಿದ್ದರಿಂದ ಡಿ-ಸ್ಟ್ರೀಟ್ನಲ್ಲಿ ಗೂಳಿ ಓಟಕ್ಕೆ ಜಾಗತಿಕ ಅನುಕೂಲಕರ ಸೂಚನೆಗಳು ಕಂಡು ಬಂದಿವೆ.
ಇದಲ್ಲದೆ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮ ಸಹ ವೇಗವಾದ ಆರ್ಥಿಕ ಚೇತರಿಕೆಯ ನಿರೀಕ್ಷೆಗಳನ್ನು ತಂದೊಡ್ಡಿದೆ. ಎಫ್‌ಐಐಗಳ ಪಾಲು ದೇಶೀಯ ಒಳಗೆ ಹರಿದು ಬರುತ್ತಿದೆ. ಜಾಗತಿಕವಾಗಿ ಸುಲಭವಾದ ದ್ರವ್ಯತೆ ಪರಿಸ್ಥಿತಿಗಳು ಭಾರತದ ಮಾರುಕಟ್ಟೆಯತ್ತ ವಾಲುತ್ತಿವೆ.
50 ಸಾವಿರ ಬಗ್ಗೆ ತಜ್ಞರ ಅಭಿಪ್ರಾಯ
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಚಿಲ್ಲರೆ ಸಂಶೋಧನಾ ವಿಭಾಗದ ಮುಖ್ಯಸ್ಥ ದೀಪಕ್ ಜಸಾನಿ ಅವರು, ಕೋವಿಡ್ ವ್ಯಾಕ್ಸಿನೇಷನ್ ನಂತರದ ಆರ್ಥಿಕತೆಯ ವಹಿವಾಟಿನ ನಿರೀಕ್ಷೆಗಳು ಮತ್ತು ಎಫ್‌ಪಿಐ ಒಳಹರಿವು ಜಾಗತಿಕ ಮಟ್ಟದಲ್ಲಿ ಕಡಿಮೆ ಬಡ್ಡಿ ವಾತಾವರಣ ಭಾರತೀಯ ಮಾರುಕಟ್ಟೆಗಳ ಲಾಭಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಮುಖ್ಯಸ್ಥ ಚಿಲ್ಲರೆ ಸಂಶೋಧನೆಯ ಸಿದ್ಧಾರ್ಥ ಖೇಮ್ಕಾ ಅವರ ಪ್ರಕಾರ, ಸೆನ್ಸೆಕ್ಸ್ ಇಂದು ಮೊದಲ ಬಾರಿಗೆ ಐತಿಹಾಸಿಕ ಮಟ್ಟವಾದ 50,000 ಗಡಿ ಮುಟ್ಟಿದೆ. ಸಾಂಕ್ರಾಮಿಕ ಲಾಕ್ಡೌನ್ ನಂತರ ವೇಗವಾಗಿ ಆರ್ಥಿಕ ಚೇತರಿಕೆಯ ನಿರೀಕ್ಷೆಯಲ್ಲಿ ಭಾರತೀಯ ಮಾರುಕಟ್ಟೆಗಳು ಕಳೆದ ಕೆಲವು ತಿಂಗಳಿಂದ ಬಲವಾದ ಆವೇಗ ಕಂಡಿವೆ. ಸಕಾರಾತ್ಮಕ ಜಾಗತಿಕ ಸೂಚನೆಗಳು, ನಿರಂತರ ಎಫ್‌ಐಐ ಒಳಹರಿವು ಮತ್ತು ಬಲವಾದ ಸಾಂಸ್ಥಿಕ ಗಳಿಕೆಯ ಮನೋಭಾವನೆಗಳು ಹೂಡಿಕೆದಾರರ ಮೇಲೆ ಪ್ರಭಾವಿಸಿವೆ ಎಂದರು.
ಇದನ್ನೂ ಓದಿ: ವಿಶ್ವದ ಅಗ್ರ 300 ಸಹಕಾರಿ ಸಂಸ್ಥೆಗಳಲ್ಲಿ ಭಾರತೀಯ ರಸಗೊಬ್ಬರ ಒಕ್ಕೂಟ 'ಇಫ್ಕೊ' ನಂ.1
ಮುಂಬರುವ ಬಜೆಟ್ನ ಸುತ್ತ ಗೂಳಿ ಮಾರುಕಟ್ಟೆಗಳಿಗೆ ಬಲ ನೀಡಿದೆ. ಬಜೆಟ್ ದೀರ್ಘಾವಧಿಯ ಆರ್ಥಿಕ ಬೆಳವಣಿಗೆಯ ಹಾದಿಗೆ ಅಡಿಪಾಯ ಹಾಕಬಹುದು ಎಂದು ಖೇಮ್ಕಾ ಅಂದಾಜಿಸಿದರು.
ಕ್ಯಾಪಿಟಲ್ವಿಯಾ ಗ್ಲೋಬಲ್ ರಿಸರ್ಚ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಲಿಖಿತಾ ಚೆಪಾ ಮಾತನಾಡಿ, ಮಾರ್ಚ್ ಬಳಿಕ 2021ರ ಆರಂಭದಲ್ಲಿ ಕೋವಿಡ್ -19 ಪ್ರಕರಣಗಳ ಕನಿಷ್ಠ ಮಟ್ಟದಿಂದಾಗಿ ಏಕಮುಖ ವಹಿವಾಟು ನಡೆದಿತ್ತು. ಮಾರುಕಟ್ಟೆಗಳು ಮಾರ್ಚ್ ಕನಿಷ್ಠಕ್ಕಿಂತ ಶೇ 100ರಷ್ಟು ಬೆಳೆದಿವೆ. ಮೂರನೇ ತ್ರೈಮಾಸಿಕ ಗಳಿಕೆಯ ಪ್ರಕಟಣೆಗಳು ಮತ್ತು ಜನರಲ್ ಬಜೆಟ್ನ ನಿರೀಕ್ಷೆ ದೊಡ್ಡದಾಗಿವೆ. ಇಲ್ಲಿಯವರೆಗೆ ಫಲಿತಾಂಶಗಳು ತುಂಬಾ ಉತ್ತಮವಾಗಿದ್ದು ಈ ಕಾರಣದಿಂದಾಗಿ ವಹಿವಾಟಿನಲ್ಲಿ ಏರಿಕೆ ಕಾಣುತ್ತಿದ್ದೇವೆ ಎಂದರು.