ನವದೆಹಲಿ: ದ್ವಿಚಕ್ರ, ಕಾರು ಮತ್ತು ಸಾರಿಗೆ ವಾಹನಗಳ ಥರ್ಡ್ ಪಾರ್ಟಿ (ಟಿಪಿ) ವಿಮೆಯ ಕಂತಿನ ಹಣವನ್ನು ಹೆಚ್ಚಿಸಲು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಚಿಂತಿಸುತ್ತಿದೆ.
ಇಂಜಿನ್ ಸಾಮರ್ಥ್ಯ 1,000 ಸಿಸಿಗಿಂತ ಕಡಿಮೆ ಇರುವ ಕಾರುಗಳ 'ಟಿಪಿ' ವಿಮೆ ಕಂತನ್ನು ಸದ್ಯದ ₹ 1,850ರಿಂದ ₹ 2,120ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದ್ದು, ಪ್ರಸಕ್ತ ವಿತ್ತೀಯ ವರ್ಷದಲ್ಲಿಯೇ ಈ ಏರಿಕೆ ಜಾರಿಗೆ ತರಲು ಐಆರ್ಡಿಎಐ ಉದ್ದೇಶಿಸಿದೆ.
1,000 ಸಿಸಿನಿಂದ 1,500 ಸಿಸಿವರೆಗಿನ ಕಾರುಗಳ ಕಂತು ₹ 2,863ರಿಂದ ₹ 3,300ಕ್ಕೆ ಏರಿಸಲಾಗುವುದು. 1,500ಸಿಸಿಗಿಂತ ಅಧಿಕ ಇಂಜಿನ್ ಸಾಮರ್ಥ್ಯದ ವಿಲಾಸಿ ಕಾರುಗಳ ₹ 7,890 'ಟಿಪಿ' ಯಥಾವತ್ತಾಗಿ ಇರಲಿದೆ.
77 ಸಿಸಿಗಿಂತ ಕಡಿಮೆ ಇರುವ ದ್ವಿಚಕ್ರ ವಾಹನಗಳ 'ಟಿಪಿ'ಯನ್ನು ಸದ್ಯದ ₹ 427 ರಿಂದ ₹ 482ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. 75 ಸಿಸಿ ಮತ್ತು 350 ಸಿಸಿ ಮಧ್ಯದ ಬೈಕ್ಗಳ 'ಟಿಪಿ' ದರ ಏರಿಕೆ ಮಾಡಲಾಗುವುದು. 350 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಬೈಕ್ಗಳ 'ಟಿಪಿ' ಯಥಾ ರೀತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ.
ಸಾಮಾನ್ಯವಾಗಿ 'ಟಿಪಿ' ದರಗಳು ಏಪ್ರಿಲ್ 1ರಿಂದ ಪರಿಷ್ಕರಿಸಲಾಗುತ್ತದೆ. ಈ ಬಾರಿ ನೂತನ ದರಗಳನ್ನು ಪರಿಷ್ಕರಿಸುವವರಿಗೆ ಹಳೆಯ ದರ ಮುಂದುವರಿಸಲು ಪ್ರಾಧಿಕಾರ ತೀರ್ಮಾನಿಸಿದೆ. ದರ ಪರಿಷ್ಕರಣೆ ಕರುಡು ನೀತಿ ರೂಪಿಸಿಲು ಮೇ 29ರವರೆಗೆ ಅಭಿಪ್ರಾಯಕ್ಕೆ ಆಹ್ವಾನಿಸಿದೆ.
ವಿದ್ಯುತ್ ಚಾಲಿತ ಖಾಸಗಿ ಕಾರ್ ಮತ್ತು ದ್ವಿಚಕ್ರ ವಾಹನಗಳ ‘ಟಿಪಿ’ ಕಂತಿನಲ್ಲಿ ಶೇ. 15ರಷ್ಟು ರಿಯಾಯ್ತಿ ಸಿಗಲಿದೆ. ಶಾಲಾ ಬಸ್, ಟ್ಯಾಕ್ಸಿ, ಬಸ್ ಮತ್ತು ಲಾರಿಗಳ ವಿಮೆ ಕಂತಿನ ದರವೂ ಏರಿಕೆಯಾಗಲಿದೆ.