ಮುಂಬೈ: ಭಾರತೀಯ ಮಾರುಕಟ್ಟೆಗಳು ತಮ್ಮ ಹಿಂದಿನ ಲಾಭಗಳನ್ನು ಹೆಚ್ಚಿಸಿದ್ದು, ಶುಕ್ರವಾರದ ಮಧ್ಯಾಹ್ನನದ ವಹಿವಾಟಿನಲ್ಲಿ ಸುಮಾರು 2 ಪ್ರತಿಶತದಷ್ಟು ಹೆಚ್ಚಿನ ವ್ಯಾಪಾರ ನಡೆಸಿದವು.
ಹಣಕಾಸು ಉತ್ತೇಜನೆಯಿಂದ ಮೇಲ್ಮುಖವಾದ ಪೇಟೆ, ಸರ್ಕಾರವು ಹೊಸ ಪ್ರಚೋದಕ ಪ್ಯಾಕೇಜ್ಗಾಗಿ ಕಾರ್ಯನಿರತವಾಗಿದೆ ಎಂಬ ವರದಿ ಇಂಬು ನೀಡಿತು.
ವಿದೇಶಿ ಸ್ವಾಮ್ಯದ ವಿಮಾ ಕಂಪನಿಗಳಿಗೆ ಪರಿಹಾರ ನಿಯಮಗಳನ್ನು ಸರ್ಕಾರ ತಿಳಿಸಿದೆ. ಹಣಕಾಸು ಸಚಿವಾಲಯವು ಭಾರತೀಯ ವಿಮಾ ಕಂಪನಿಗಳ (ವಿದೇಶಿ ಹೂಡಿಕೆ) ತಿದ್ದುಪಡಿ ನಿಯಮ, 2021ರಲ್ಲಿ ಸೂಚಿಸಿದೆ. ಇದು ಹಣಕಾಸಿನ ವರ್ಷದಲ್ಲಿ ಲಾಭಾಂಶ ಪಾವತಿ ಘೋಷಿಸಿದರೆ ಶೇ 49ಕ್ಕಿಂತ ಹೆಚ್ಚಿನ ವಿದೇಶಿ ಮಾಲೀಕತ್ವ ಹೊಂದಿರುವ ವಿಮಾದಾರರು ಶೇ 180ರಷ್ಟು ಪರಿಹಾರದ ಅಂವು ಕಾಯ್ದುಕೊಳ್ಳಬೇಕಾಗುತ್ತೆ.
ಎಸ್‌ಬಿಐ ಶುಕ್ರವಾರ ಮಾರ್ಚ್ 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 6,450.75 ಕೋಟಿ ರೂ. ನಿವ್ವಳ ಲಾಭ ವರದಿ ಮಾಡಿದೆ. ಸಾಲದಾತ ಪಿಎಟಿ ಹಿಂದಿನ ವರ್ಷದ ಲಾಭ 3,580.8 ಕೋಟಿ ರೂ.ಗಿಂತ ಶೇ 80.14ರಷ್ಟು ಹೆಚ್ಚಾಗಿದೆ. ತ್ರೈಮಾಸಿಕ ಆಧಾರದ ಮೇಲೆ ತಳಮಟ್ಟವು ಶೇ 24.14ರಷ್ಟು ವಿಸ್ತರಿಸಿದೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ 99,122 ಕೋಟಿ ರೂ. ವರ್ಗಾವಣೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅನುಮೋದನೆ ನೀಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ನಿರ್ದೇಶಕರ ಸಭೆಯಲ್ಲಿ ಸೆಂಟ್ರಲ್ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದೆ.
ಈ ಎಲ್ಲಾ ಕಾರಣಗಳಿಂದಾಗಿ ಮುಂಬೈ ಷೇರುಪೇಟೆ ಮಧ್ಯಂತರ ವಹಿವಾಟಿನ ಅವಧಿಯಲ್ಲಿ 1000 ಅಂಕಗಳಷ್ಟು ಹೆಚ್ಚಳವಾಗಿತ್ತು. ದಿನದ ಅಂತ್ಯಕ್ಕೆ ಮುಂಬೈ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 975.62 ಅಂಕ ಹೆಚ್ಚಳವಾಗಿ 50,540.48 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 277.50 ಅಂಕ ಏರಿಕೆಯೊಂದಿಗೆ 15183.55 ಅಂಕಗಳಲ್ಲಿ ಕೊನೆಗೊಂಡಿತು.