ETV Bharat / business

ಭಾರತದ ಜಿಡಿಪಿ ಮೈನಸ್​ ಶೇ 10 ರಿಂದ ಮೈನಸ್​ ಶೇ 7.4ಕ್ಕೆ ಸುಧಾರಿಸುತ್ತೆ: SBI ವರದಿ - ಕೋವಿಡ್ ಪ್ರಭಾವಿತ ಜಿಡಿಪಿ ವೃದ್ಧಿ

2012ರ 4ನೇ ತ್ರೈಮಾಸಿಕದಿಂದ 2020ರ 4ನೇ ತ್ರೈಮಾಸಿಕದವರೆಗಿನ 41ಕ್ಕೂ ಅಧಿಕ ಆವರ್ತನ ಸೂಚಕಗಳ ಸಾಮಾನ್ಯ/ ಪ್ರತಿನಿಧಿ/ ಸುಪ್ತ ಅಂಶಗಳನ್ನು ಅಂದಾಜು ಮಾಡಲು ಡೈನಾಮಿಕ್ ಫ್ಯಾಕ್ಟರ್ ಮಾದರಿ ಬಳಸಿದ್ದೇವೆ. ಈ ಮಾದರಿಯ ಆಧಾರದ ಮೇಲೆ ಮೂರನೇ ತ್ರೈಮಾಸಿಕದ ಮುನ್ಸೂಚನೆಯ ಜಿಡಿಪಿ ಬೆಳವಣಿಗೆಯು ಶೇ 0.1ರಷ್ಟಿದೆ (ಕೆಳಮುಖ) ಎಂದು ಎಸ್​ಬಿಐ ಇಕೋವ್ರಾಪ್ ವರದಿ ಹೇಳಿದೆ.

India's GDP
ಜಿಡಿಪಿ
author img

By

Published : Dec 16, 2020, 5:41 PM IST

ನವದೆಹಲಿ: ಕೋವಿಡ್ ಸಾಂಕ್ರಾಮಿಕ ಪ್ರಭಾವದಿಂದಾಗಿ ಭಾರತದ ಜಿಡಿಪಿ ಸಂಕೋಚನವು 2021ರ ಹಣಕಾಸು ವರ್ಷದಲ್ಲಿ ಈ ಹಿಂದಿನ ಅಂದಾಜಿತ ಮೈನಸ್​ ಶೇ 10.9ರಿಂದ ಮೈನಸ್​ ಶೇ 4.4ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಎಸ್​ಬಿಐ ಇಕೋವ್ರಾಪ್​ ವರದಿ ತಿಳಿಸಿದೆ.

ನಮ್ಮ ಪರಿಷ್ಕೃತ ಜಿಡಿಪಿ ಅಂದಾಜುಗಳನ್ನು ಉದ್ಯಮದ ಚಟುವಟಿಕೆ, ಸೇವಾ ಕಾರ್ಯಗಳು ಮತ್ತು ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದ 41ಕ್ಕೂ ಅಧಿಕ ಆವರ್ತನ ಸೂಚಕಗಳ ಜತೆಗೆ ಎಸ್‌ಬಿಐ 'ನೌಕಾಸ್ಟಿಂಗ್ ಮಾಡೆಲ್' ಆಧರಿಸಿವೆ ಎಂದು ವರದಿ ಹೇಳಿದೆ.

2012ರ 4ನೇ ತ್ರೈಮಾಸಿಕದಿಂದ 2020ರ 4ನೇ ತ್ರೈಮಾಸಿಕದವರೆಗಿನ 41ಕ್ಕೂ ಅಧಿಕ ಆವರ್ತನ ಸೂಚಕಗಳ ಸಾಮಾನ್ಯ/ ಪ್ರತಿನಿಧಿ/ ಸುಪ್ತ ಅಂಶಗಳನ್ನು ಅಂದಾಜು ಮಾಡಲು ಡೈನಾಮಿಕ್ ಫ್ಯಾಕ್ಟರ್ ಮಾದರಿ ಬಳಸಿದ್ದೇವೆ. ಈ ಮಾದರಿಯ ಆಧಾರದ ಮೇಲೆ ಮೂರನೇ ತ್ರೈಮಾಸಿಕದ ಮುನ್ಸೂಚನೆಯ ಜಿಡಿಪಿ ಬೆಳವಣಿಗೆಯು ಶೇ 0.1ರಷ್ಟಿದೆ (ಕೆಳಮುಖ) ಎಂದು ವರದಿ ಸೂಚಿಸಿದೆ.

41ಕ್ಕೂ ಅಧಿಕ ಆವರ್ತನದ ಪ್ರಮುಖ ಸೂಚಕಗಳಲ್ಲಿ ಶೇ 58ರಷ್ಟು ಇಂಡೆಕ್ಸ್​ಗಳು ಮೂರನೇ ತ್ರೈಮಾಸಿಕದಲ್ಲಿ ವೇಗದ ಪ್ರದರ್ಶನ ತೋರಿವೆ.

ಆರ್‌ಟಿಒ ವಹಿವಾಟು, ಆರ್‌ಟಿಒನಲ್ಲಿ ಆದಾಯ ಸಂಗ್ರಹಣೆ, ಸರಕು ಸಾಗಣೆಯ ಆದಾಯ ಗಳಿಕೆ, ವಾರದ ಆಹಾರ ಸ್ವೀಕಾರ, ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಸೇರಿದಂತೆ ವಿವಿಧ ಆರ್ಥಿಕ ಸೂಚಕಗಳ ಸಕಾರಾತ್ಮಕ ಆವೇಗದ ಪ್ರವೃತ್ತಿಯು ನವೆಂಬರ್‌ನಲ್ಲಿ ಮುಂದುವರೆದಿದೆ ಎಂದು ವರದಿ ತಿಳಿಸಿದೆ.

ಒಂದೇ ದಿನ 1185 ರೂ. ಜಿಗಿದ ಬೆಳ್ಳಿ : ಇನ್ನು ಬಂಗಾರ ದರ ಎಷ್ಟಾಗಿರಬಹುದು?

ಹೆಚ್ಚಿನ ಆವರ್ತನ ಸೂಚಕಗಳನ್ನು ಆಧರಿಸಿದ ವ್ಯವಹಾರ ಚಟುವಟಿಕೆ ಸೂಚ್ಯಂಕವು ದೀಪಾವಳಿಯ ವಾರದಲ್ಲಿ ಸಾಧಾರಣ ಕುಸಿತದ ನಂತರ ವೇಗವನ್ನು ಸುಧಾರಿಸಿಕೊಂಡಿರುವ ಹಾಗೆ ತೋರಿಸುತ್ತದೆ. 2022ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯು ಶೇ 11ರಷ್ಟಿದೆ ಎಂದು ಅಂದಾಜಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.