ನವದೆಹಲಿ: ಭಾರತದಲ್ಲಿ ಆಗುತ್ತಿರುವ ಆರ್ಥಿಕ ಕುಸಿತವು ಮುಂದಿನ ತ್ರೈಮಾಸಿಕಗಳಲ್ಲಿ ಸರ್ಕಾರ ತೆಗೆದುಕೊಳ್ಳುವ ಉತ್ತೇಜಕ ಕ್ರಮಗಳಿಂದ ಸರಿದೂಗಲಿದೆ ಎಂದು ಭಾರತೀಯ ಉದ್ಯಮ ಅಭಿಪ್ರಾಯಪಟ್ಟಿದೆ.
2019-20ರ 2ನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಸ್ಥಿತಿ ಶೇ.4.5ಕ್ಕೆ ಇಳಿದಿರುವುದು, ಆರ್ಥಿಕತೆಯ ಸಾಮರ್ಥ್ಯಕ್ಕಿಂತ ಕೆಳಗಿಳಿದಂತಾಗಿದೆ. ಆದರೆ, ಇದೇ ರೀತಿ ಇರದೆ, ಮುಂದಿನ ದಿನಗಳಲ್ಲಿ ಆರ್ಥಿಕ ಕುಸಿತದಿಂದ ಮೇಲಕ್ಕೇಳಲಿದೆ ಎಂದು ಅಸ್ಸೋಚಾಮ್ ಸೆಕ್ರೆಟರಿ ಜನರಲ್ ದೀಪಕ್ ಸೂದ್ ಹೇಳಿದ್ದಾರೆ.
ಖಾಸಗಿ ಅಂತಿಮ ಬಳಕೆಗಳಿಂದಾಗಿ ಗ್ರಾಹಕರ ಬೇಡಿಕೆಯಲ್ಲಿ ಶೇ.5ರಷ್ಟು ಬೆಳೆವಣಿಗೆಯಾಗುತ್ತಿದೆ. ಇದರಿಂದಾಗಿ ಜಿಡಿಪಿ ಮೇಲೇರಲಿದೆ ಎಂಬ ಭರವಸೆ ಹುಟ್ಟಿಕೊಂಡಿದೆ. ಆದರೆ, ಅದಕ್ಕೂ ಮುನ್ನ ಖಚಿತವಾಗಿ ಗ್ರಾಹಕರು ಈ ಮನೋಭಾವವನ್ನು ಹೆಚ್ಚಿಸಕೊಳ್ಳಬೇಕಿದೆ ಎಂದು ದೀಪಕ್ ಸೂದ್ ಅಭಿಪ್ರಾಯಪಟ್ಟಿದ್ದಾರೆ.
ಬಯೋಕಾನ್ ಸಂಸ್ಥೆಯ ಮುಖ್ಯಸ್ಥರಾಗಿರುವ ಕಿರಣ್ ಮಜುಮ್ದಾರ್-ಷಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಕೆಲವು ಪ್ರಾಯೋಗಿಕ ನೀತಿಗಳೊಂದಿಗೆ ನಾವು ಬೇಗನೆ ಆರ್ಥಿಕ ಕುಸಿತದಿಂದ ಹೊರಬರಬಹುದು ಎಂದಿದ್ದಾರೆ.
-
We can quickly rise to the top again with a few pragmatic policies https://t.co/AncXTYwsQD
— Kiran Mazumdar Shaw (@kiranshaw) November 29, 2019 " class="align-text-top noRightClick twitterSection" data="
">We can quickly rise to the top again with a few pragmatic policies https://t.co/AncXTYwsQD
— Kiran Mazumdar Shaw (@kiranshaw) November 29, 2019We can quickly rise to the top again with a few pragmatic policies https://t.co/AncXTYwsQD
— Kiran Mazumdar Shaw (@kiranshaw) November 29, 2019
ಎಫ್‌ಐಸಿಸಿಐ ಅಧ್ಯಕ್ಷ ಸಂದೀಪ್ ಸೋಮನಿ, ಈ ಬಗ್ಗೆ ಮಾತನಾಡಿದ್ದು, ಜುಲೈ-ಸೆಪ್ಟೆಂಬರ್‌ನಲ್ಲಿ ಆರ್ಥಿಕತೆ ಶೇ. 4.5ಕ್ಕಿಳಿದಿರುವುದು ಕಳವಳಕಾರಿ ವಿಷಯ. ಆದರೆ, ಆರ್ಥಿಕತೆಗೆ ಹೆಚ್ಚಿನ ಶಕ್ತಿಯನ್ನು ತುಂಬಲು ಸರ್ಕಾರ ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ ಮತ್ತು ಪ್ರಸಕ್ತ ಹಣಕಾಸಿನ ದ್ವಿತೀಯಾರ್ಧದಲ್ಲಿ ಆರ್ಥಿಕ ಕುಸಿತ ಸರಿದೂಗಲಿದೆ ಎಂದು ನಾನು ಭಾವಿಸುತ್ತೇನೆ ಎಂದರು.
2019 ಜುಲೈ-ಸೆಪ್ಟೆಂಬರ್‌ನಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇ. 4.5ಕ್ಕೆ ತಲುಪಿದೆ. ಉತ್ಪಾದನೆಯಲ್ಲಿನ ಕುಸಿತ ಮತ್ತು ಕೃಷಿ ಕ್ಷೇತ್ರದ ಚಟುವಟಿಕೆಯು ದೇಶದ ಆರ್ಥಿಕ ಬೆಳವಣಿಗೆಗೆ ಪೆಟ್ಟು ನೀಡಿತ್ತು ಎಂದು ಸರ್ಕಾರದಿಂದ ಶುಕ್ರವಾರ ಬಿಡುಗಡೆಯಾದ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.