ETV Bharat / business

ಗಗನಕ್ಕೇರಿದ ಇಂಧನ ಬೆಲೆ: ಎಲೆಕ್ಟ್ರಿಕ್ ಬೈಕ್ ಏರಿದ ಹುಬ್ಬಳ್ಳಿ ಮಂದಿ - people purchasing electric bikes,

ಎಲೆಕ್ಟ್ರಿಕಲ್ ಸ್ಕೂಟರ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. 100 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಹಾಕಿಸುವ ಬದಲು 20-25 ರೂಪಾಯಿನಲ್ಲಿ 80-100 ಕಿ.ಮೀ ದೂರ ಕ್ರಮಿಸಬಹುದಾಗಿದೆ. ಇದರಿಂದಾಗಿ ಹುಬ್ಬಳ್ಳಿ ಜನತೆ ಇ-ಸ್ಕೂಟರ್‌ಗಳತ್ತ ಮುಖಮಾಡಿದ್ದಾರೆ.

electric-bikes-news
ಎಲೆಕ್ಟ್ರಿಕ್ ಬೈಕ್ ಮೊರೆ ಹೋದ ಹುಬ್ಬಳ್ಳಿ ಜನತೆ
author img

By

Published : Mar 9, 2021, 6:56 PM IST

ಹುಬ್ಬಳ್ಳಿ: ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದ ಪಾರಾಗಲು ಹುಬ್ಬಳ್ಳಿ-ಧಾರವಾಡ ಜನತೆ ಎಲೆಕ್ಟ್ರಿಕಲ್ ಬೈಕ್ ಮೊರೆ ಹೋಗುತ್ತಿದ್ದಾರೆ. ‌

ಎಲೆಕ್ಟ್ರಿಕ್ ಬೈಕ್ ಮೊರೆ ಹೋದ ಹುಬ್ಬಳ್ಳಿ ಜನತೆ

ಓದಿ: ಜಮೀನು ವಿವಾದ: ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ ರಾಕಿ ಬಾಯ್​​​

ಕೊರೊನಾ ಎಂಬ ಮಹಾಮಾರಿಗೆ ತತ್ತರಿಸಿದ ಜನತೆಗೆ, ಕೇಂದ್ರ ಸರ್ಕಾರ ದಿನನಿತ್ಯದ ಬಳಸುವ ದಿನಸಿಯಿಂದ, ಇಂಧನ ಬೆಲೆ ಎಲ್ಲವನ್ನೂ ಏರಿಕೆ ಮಾಡಿ ಸಾರ್ವಜನಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.‌ ಇದರಿಂದಾಗಿ ಸಾರ್ವಜನಿಕರು ಪೆಟ್ರೋಲ್ ಬೈಕ್ ಬಿಟ್ಟು ಕಡಿಮೆ ವೆಚ್ಚ ಹಾಗೂ ಪರಿಸರ ಸ್ನೇಹಿ ಇ-ಬೈಕ್ ನತ್ತ ಒಲವು ತೋರುತ್ತಿದ್ದಾರೆ‌.

ಎಲೆಕ್ಟ್ರಿಕಲ್ ಸ್ಕೂಟರ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. 100 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಹಾಕಿಸುವ ಬದಲು 20-25 ರೂಪಾಯಿನಲ್ಲಿ 80-100 ಕಿ.ಮೀ ದೂರ ಕ್ರಮಿಸಬಹುದಾಗಿದೆ. ಇದರಿಂದಾಗಿ ಹುಬ್ಬಳ್ಳಿ ಜನತೆ ಇ-ಸ್ಕೂಟರ್‌ಗಳಿಗೆ ಮನ ಸೋಲುತ್ತಿದ್ದಾರೆ.

ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ ಮಾರಾಟ ಮಳಿಗೆಗಳು ಆರಂಭವಾಗಿದ್ದು, ಈ ಮಳಿಗೆಗಳಲ್ಲಿ ಕನಿಷ್ಟ 12 ವಿವಿಧ ಮಾದರಿಯ ಸ್ಕೂಟರ್ ಲಭ್ಯವಿದೆ. 43,000 ರಿಂದ 1,40,000 ರೂ. ವರೆಗೂ ಸ್ಕೂಟರ್​​​ಗಳು ಲಭ್ಯವಿದೆ. ಅಲ್ಲದೇ 25 ಕಿ.ಮೀ ವೇಗದಲ್ಲಿ ಕ್ರಮಿಸುವ ವಾಹನಗಳಿಗೆ ಆರ್​​ಟಿಒ ನೋಂದಣಿ ಅಗತ್ಯವಿಲ್ಲ. ಹೀಗಾಗಿ ಇ-ಸ್ಕೂಟರ್‌ಗಳಿಗೆ ಹೆಚ್ಚು ಬೇಡಿಕೆ ಜೊತೆಗೆ ಖರೀದಿಯಾಗುತ್ತಿದೆ.

ಕೇಂದ್ರದ ಗುಜರಿ ನೀತಿ ಜಾರಿ ಮಾಡಿದ ಪರಿಣಾಮ, ಲಕ್ಷಾಂತರ ವಾಹನಗಳು ಗುಜರಿಗೆ ಸೇರಲಿವೆ. ಹೀಗಾಗಿ ಹೊಸ ಇ-ಸ್ಕೂಟರ್, ದ್ವಿಚಕ್ರ ವಾಹನ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ ಎನ್ನುತ್ತಾರೆ ಶೋ ರೂಂ ಮಾಲೀಕರು.

ಒಟ್ಟಿನಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿರುವ ಹಿನ್ನೆಲೆ, ಇ-ಸ್ಕೂಟರ್ ಮೊರೆ ಹೋಗಿರುವ ಸಾರ್ವಜನಿಕರಿಗೆ ಕಂಪನಿಯು, ಉತ್ತಮ ಸರ್ವಿಸ್ ಜೊತೆಗೆ ಪೆಟ್ರೋಲ್ ಬಂಕ್ ತರಹ ವಿದ್ಯುತ್ ಬಂಕ್ ಮಾಡಿ ಮುಂದೆ ಆಗಬೇಕಾದ ಸಮಸ್ಯೆ ತಡೆಯುವ ಮೂಲಕ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಬೇಕಾಗಿದೆ‌‌‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.