ನ್ಯೂಯಾರ್ಕ್: ಗೂಗಲ್ ಕಂಪನಿ ಈ ವರ್ಷ ಅಮೆರಿಕದಲ್ಲಿ 7 ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಹಣ ಹೂಡಿಕೆ ಮಾಡುತ್ತದೆ. ಈ ಮೂಲಕ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಟೆಕ್ ದೈತ್ಯ ಸಿಇಒ ಭರವಸೆ ನೀಡಿದ್ದಾರೆ.
ನಾವು ಅಮೆರಿಕದಾದ್ಯಂತ 7 ಬಿಲಿಯನ್ ಡಾಲರ್ ಅನ್ನು ಕಚೇರಿ ಮತ್ತು ಡೇಟಾ ಕೇಂದ್ರಗಳಲ್ಲಿ ಹೂಡಿಕೆ ಮಾಡಲು ಯೋಜಿಸಿದ್ದೇವೆ. ಈ ವರ್ಷ ಕನಿಷ್ಠ 10,000 ಹೊಸ ಪೂರ್ಣಾವಧಿಯ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದು ಸುಂದರ್ ಪಿಚೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.