ನವದೆಹಲಿ: ಕಳೆದ ಎರಡು ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನ ಮತ್ತು ಬೆಳ್ಳಿಯ ದರ ಗುರುವಾರದ ವಹಿವಾಟಿನಂದು ಮತ್ತೆ ಏರಿಕೆಯತ್ತ ಸಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಚಿನ್ನವು 237 ರೂ. ಏರಿಕೆಯಾಗಿದ್ದು, 10 ಗ್ರಾಂ. 47,994 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂ.ಗೆ 47,757 ರೂ.ಯಲ್ಲಿ ಖರೀದಿ ಆಗುತ್ತಿತ್ತು. ಬೆಳ್ಳಿ ಸಹ ಕಿಲೋಗ್ರಾಂಗೆ 71,268 ರೂ.ಗಳಿಂದ 153 ರೂ. ಹೆಚ್ಚಳವಾಗಿ 71,421 ರೂ.ಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,874 ಡಾಲರ್ ಮತ್ತು ಬೆಳ್ಳಿ ಔನ್ಸ್‌ಗೆ 27.80 ಡಾಲರ್ ತಲುಪಿದೆ.
ಏಷ್ಯಾದಲ್ಲಿ ಹೆಚ್ಚುತ್ತಿರುವ ವೈರಸ್ ಪ್ರಕರಣಗಳು ಬಲವಾದ ಡಾಲರ್ ಹೊರತಾಗಿಯೂ ಚಿನ್ನದ ಖರೀದಿ ಹೆಚ್ಚಿಸಿವೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.