ನವದೆಹಲಿ : ಜಾಗತಿಕವಾಗಿ ಬೆಲೆ ಬಾಳುವ ಲೋಹದ ಬೆಲೆಯಲ್ಲಿನ ಲಾಭ ಪ್ರತಿ ಬಿಂಬಿಸುವ ಚಿನ್ನದ ಬೆಲೆಯು ಬುಧವಾರ 10 ಗ್ರಾಂ.ಗೆ 675 ರೂ.ನಿಂದ 48,169 ರೂ.ಗೆ ಏರಿಕೆಯಾಗಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ 47,494 ರೂ.ಯಲ್ಲಿ ಕೊನೆಗೊಂಡಿತು. ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಕೂಡ 1,280 ರೂ.ಯಷ್ಟು ಏರಿಕೆಯಾಗಿ 62,496 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಪ್ರತಿ ಔನ್ಸ್‌ಗೆ ಕ್ರಮವಾಗಿ 1,815 ಮತ್ತು 23.80 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.
ವೃತ್ತಿಪರತೆ, ಸ್ಪರ್ಧೆ ತರಲು ಸರ್ಕಾರಿ ಕಂಪನಿಗಳ ಖಾಸಗೀಕರಣ : ಪ್ರಧಾನ್ ಸ್ಪಷ್ಟನೆ
ಚಿನ್ನದ ಬೆಲೆಗಳು ಬುಧವಾರ 1,800 ಡಾಲರ್‌ಗಿಂತ ಹೆಚ್ಚಿನ ಮೊತ್ತದಲ್ಲಿ ಮಾರಾಟ ಕಂಡಿದ್ದು, ಹಿಂದಿನ ಲಾಭಗಳನ್ನು ದಿನದ ವಹಿವಾಟಿನಲ್ಲಿಯೂ ಸಹ ವಿಸ್ತರಣೆಗೊಂಡಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದರು.