ನವದೆಹಲಿ: ಜಾಗತಿಕ ಮಟ್ಟದಲ್ಲಿನ ಸಕಾರಾತ್ಮಕ ಪ್ರವೃತ್ತಿಯ ಮೇರೆಗೆ ಚಿನ್ನದ ಬೆಲೆಯು ಮಂಗಳವಾರ ರಾಷ್ಟ್ರದ ರಾಜಧಾನಿಯಲ್ಲಿ 10 ಗ್ರಾಂ.ಗೆ 45 ರೂ.ಯಷ್ಟು ಹೆಚ್ಚಳವಾಗಿದೆ.
ಹಳದಿ ಲೋಹವು ಸೋಮವಾರ 10 ಗ್ರಾಂ.ಗೆ 48,228 ರೂ.ಯಲ್ಲಿ ಕೊನೆಗೊಂಡಿತ್ತು. ಬೆಳ್ಳಿಯ ಬೆಲೆ ಸಹ ಪ್ರತಿ ಕೆ.ಜಿ. ಮೇಲೆ 407 ರೂ. ಏರಿಕೆಯಾಗಿ 59,380 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಕೆ.ಜಿ.ಗೆ ಗರಿಷ್ಠ 58,973 ರೂ.ಯಲ್ಲಿ ಮಾರಾಟ ಆಗಿತ್ತು.
ಓದಿ: ಮೊದಲ ಬಾರಿಗೆ 13 ಸಾವಿರ ಗಡಿ ದಾಟಿದ ನಿಫ್ಟಿ: ಸೆನ್ಸೆಕ್ಸ್ ಗೂಳಿ ಹೂಂಕಾರಕ್ಕೆ ಹೂಡಿಕೆದಾರರ ಕುಣಿತ
ಡಾಲರ್ ಎದುರು ರೂಪಾಯಿ ಮೌಲ್ಯ ವೃದ್ಧಿಯ ಹೊರತಾಗಿಯೂ ಜಾಗತಿಕ ಪೇಟೆಯಲ್ಲಿ ಚಿನ್ನದ ಬೆಲೆಯ ಚೇತರಿಕೆಗೆ ಅನುಗುಣವಾಗಿ ದೆಹಲಿಯಲ್ಲಿ 24 ಕ್ಯಾರೆಟ್‌ಗಳ ಸ್ಪಾಟ್ ಚಿನ್ನದ ಬೆಲೆ 45 ರೂ.ಗಳಷ್ಟು ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಕ್ರಮವಾಗಿ ಔನ್ಸ್‌ಗೆ 1,812 ಡಾಲರ್ ಮತ್ತು 23.34 ಡಾಲರ್‌ಗೆ ವಹಿವಾಟು ನಡೆಸುತ್ತಿವೆ.