ನವದೆಹಲಿ: ಜಾಗತಿಕ ನಡೆಯನ್ನು ಅನುಸರಿಸಿದ ಚಿನ್ನದ ದರದಲ್ಲಿ ಸತತ ನಾಲ್ಕನೇ ದಿನವೂ ಇಳಿಕೆ ಕಂಡುಬಂದಿದೆ.
ಎಂಸಿಎಕ್ಸ್ನ ಫೆಬ್ರವರಿ ಗೋಲ್ಡ್ ಫ್ಯೂಚರ್ ಶೇ. 0.30ರಷ್ಟು ಇಳಿಕೆಯಾಗಿ ಪ್ರತಿ 10 ಗ್ರಾಂ ಬಂಗಾರವು ₹ 37,597ರಲ್ಲಿ ಮಾರಾಟ ಆಗುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ 40,000 ರೂ. ಗಡಿ ದಾಟಿದ್ದ ಚಿನ್ನದ ದರದಲ್ಲಿ ಇಲ್ಲಿವರೆಗೆ ₹ 2,400ರಷ್ಟು ಇಳಿಕೆ ಕಂಡಿದೆ.
ಚಿನ್ನದ ಹಾದಿಯಲ್ಲಿ ಸಾಗಿರುವ ಬೆಳ್ಳಿಯ ದರದಲ್ಲಿ ಕೂಡ ಶೇ. 0.20ರಷ್ಟು ಇಳಿಕೆಯಾಗಿದೆ. ಪ್ರತಿ ಕೆಜಿ ಬೆಳ್ಳಿಯು ₹ 43,465ಗೆ ಖರೀದಿ ಆಗುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ 7 ಪೈಸೆಯಷ್ಟು ಏರಿಕೆಯಾಗಿ ₹ 71.11ರಲ್ಲಿ ವಹಿವಾಟು ನಿರತವಾಗಿದೆ.