ನವದೆಹಲಿ: ಸಾಲು- ಸಾಲು ಹಬ್ಬಗಳ ಸೀಸನ್ ಪ್ರಯುಕ್ತ ಕಂಡುಬರಲಿರುವ ಬೇಡಿಕೆಯ ಪೂರ್ವಭಾವಿಯಾಗಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ದರದಲ್ಲಿ ₹ 372 ಕುಸಿದು ಒಟ್ಟು ₹ 38,975 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ ಎಂದು ಎಚ್‌ಡಿಎಫ್‌ಸಿ ವಿಶ್ಲೇಷಿಸಿ ತಿಳಿಸಿದೆ.
ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೇಡಿಕೆಯು ಕುಸಿದಿರುವುದರಿಂದ ಪ್ರತಿ ಕೆ.ಜಿ. ಬೆಳ್ಳಿಯ ಮೇಲೆ ₹ 1,150 ಕಡಿತವಾಗಿ ₹ 48,590ರಲ್ಲಿ ವಹಿವಾಟು ನಡೆಸುತ್ತಿದೆ.
ಅತ್ಯಧಿಕ ಚಿನ್ನದ ಬೆಲೆ ಏರಿಕೆಯಿಂದಾಗಿ ಭೌತಿಕ ಮಾರುಕಟ್ಟೆಯಲ್ಲಿ ಹಬ್ಬಗಳ ದಿನಗಳಲ್ಲಿ ಕಂಡುಬರುವ ಬೇಡಿಕೆಯು ಇನ್ನೂ ಹೆಚ್ಚಳವಾಗಿಲ್ಲ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ನ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಯ ನ್ಯೂಯಾರ್ಕ್ನಲ್ಲಿ ಚಿನ್ನದ ಪ್ರತಿ ಔನ್ಸ್ 1,490 ಡಾಲರ್ ಮತ್ತು ಬೆಳ್ಳಿಯು 18.10 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಸಭೆಗೂ ಮುನ್ನ ಮತ್ತು ಅಮೆರಿಕ- ಚೀನಾ ವ್ಯಾಪಾರ ವ್ಯಾಜ್ಯಗಳ ಬಗ್ಗೆ ಸಕಾರಾತ್ಮಕ ಬೆಳವಣಿಗೆಯ ನಡುವೆ ದರದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ.