ETV Bharat / business

ಚಂಚಲವಾದ ಮಾರುಕಟ್ಟೆ, ಏರುತ್ತಿರುವ ದರ... ಚಿನ್ನದ ಮೇಲೆ ಹಣ ಹೂಡಿಕೆ ಎಷ್ಟು ಸುರಕ್ಷಿತ?

ಪ್ರಸ್ತುತ ಷೇರು ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಹಾಗೂ ಆರ್ಥಿಕ ಹಿಂಜರಿತದ ದಿನಗಳಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತ ಎನ್ನಲಾಗುತ್ತಿದೆ. ವಿವಿಧ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್​ಗಳು ತಮ್ಮ ಖಜಾನೆಯ ಭದ್ರತಾ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಖರೀದಿಸಲು ಆಸಕ್ತಿ ತಳಿಯುತ್ತಿವೆ.

author img

By

Published : Nov 2, 2019, 11:21 AM IST

ಚಿನ್ನದ ಹೂಡಿಕೆ

ಬೆಂಗಳೂರು: ಎರಡು ತಿಂಗಳ ಹಿಂದೆ ಬಂಗಾರ ಧಾರಣೆ ಸಾರ್ವಕಾಲಿಕ ಗರಿಷ್ಠ ಏರಿಕೆ ದಾಖಲಿಸಿತ್ತು. ಇತ್ತೀಚಿನ ದಿನಗಳಲ್ಲಿ ಬಂಗಾರ ಬೆಲೆ ಏರಿಳಿತವೂ ಸಾಮಾನ್ಯ ಎನ್ನುವಂತಾಗಿದೆ.

ಕೇಂದ್ರ ಸರ್ಕಾರ ಬಂಗಾರದ ಮಳಿಗೆಗಳ ಮೇಲೆ ಶುಲ್ಕ ವಿಧಿಸುವ ಚಿಂತನೆ ಮಾಡಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. 'ಇಂತಹ ಯೋಜನೆ ಜಾರಿ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ' ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಅನಿಶ್ಚಿತ ಮಾರುಕಟ್ಟೆಯ ಸಂದರ್ಭದಲ್ಲಿ ಚಿನ್ನದ ಮೇಲೆ ಹೂಡಿಕೆ ಸುರಕ್ಷಿತವೇ ಎಂಬ ಅನುಮಾನ ಹೂಡಿಕೆದಾರರಲ್ಲಿ ಮೂಡಿದೆ.

ಕಳೆದ ಒಂದು ವರ್ಷದಲ್ಲಿ ಬಂಗಾರದ ಬೆಲೆಯಲ್ಲಿ ಸುಮಾರು 7 ಸಾವಿರ ರೂ.ನಷ್ಟು ಏರಿಕೆ ಆಗಿದೆ. ಮುಂಬರುವ ವರ್ಷದ ಆರಂಭದಲ್ಲಿ ಚಿನ್ನಾಭರಣ ಬೆಲೆಯಲ್ಲಿ ಮತ್ತಷ್ಟು ಏರಿಕೆ ಆಗುವ ಭವಿಷ್ಯವನ್ನು ಹೂಡಿಕೆ ತಜ್ಞರು ನುಡಿದಿದ್ದಾರೆ. ಪ್ರಸ್ತುತ 10 ಗ್ರಾಂ.ನ ಶುದ್ಧ 24 ಕ್ಯಾರೆಟ್​​​​ ಬಂಗಾರದ ಬೆಲೆ 39,240 ರೂ.ಯಲ್ಲಿ ಮಾರಾಟ ಆಗುತ್ತಿದೆ.

ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಿನ್ನದಲ್ಲಿ ಹೂಡಿಕೆ ಮಾಡುವುದರಿಂದ ಅಲ್ಪಾವಧಿಯಲ್ಲಿ ಮತ್ತು ದೀರ್ಘಾವಧಿಯಲ್ಲಿ ಉತ್ತಮ ಲಾಭ ದೊರೆಯುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಆಗಾಗ ಕೆಲವು ಏರಿಳಿತಗಳು ಕಂಡು ಬರುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಉತ್ತಮ. ಇನ್ನು ಬಂಗಾರದ ಇಟಿಎಫ್‌ಗಳಂತಹ ಎಲೆಕ್ಟ್ರಾನಿಕ್ ವಿಧಾನಗಳಲ್ಲಿ ಖರೀದಿಸುವುದರಿಂದ ತೊಂದರೆಯುಂಟಾಗುತ್ತದೆ ಎಂಬ ಬಗ್ಗೆ ಹೂಡಿಕೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಷೇರು ಮಾರುಕಟ್ಟೆಯ ಏರಿಳಿತದ ದೃಷ್ಟಿಯಿಂದ ಪ್ರಸ್ತುತ ಸನ್ನಿವೇಶದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಜನರು ಮತ್ತು ಸರ್ಕಾರಗಳು ಆರ್ಥಿಕ ಹಿಂಜರಿತದ ಭಯದಿಂದ ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಖರೀದಿಸುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏನೇ ಇದ್ದರು ಬಂಗಾರದ ಮೇಲೆ ಹೂಡಿಕೆ ಮಾಡುವವರು ಎಚ್ಚರಿಕೆಯಿಂದ ಮುಂದುವರಿಯುವುದು ಒಳ್ಳೆಯದು. ಪ್ರಸ್ತುತ ಷೇರು ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಹಾಗೂ ಆರ್ಥಿಕ ಹಿಂಜರಿತದ ದಿನಗಳಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತ ಎನ್ನಲಾಗುತ್ತಿದೆ. ವಿವಿಧ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್​ಗಳು ತಮ್ಮ ಖಜಾನೆಯ ಭದ್ರತಾ ದೃಷ್ಟಯಿಂದ ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಖರೀದಿಸಲು ಆಸಕ್ತಿ ತಳಿಯುತ್ತಿವೆ.

Intro:Body:

ಬಂಗಾರ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತವೇ...?

ಬೆಂಗಳೂರು:  ಎರಡು ತಿಂಗಳ ಹಿಂದೆ ಬಂಗಾರ ಗರಿಷ್ಠ ಏರಿಕೆ ದಾಖಲಿಸಿ ದಾಖಲೆ ಬರೆದಿತ್ತು. ಬಂಗಾರದ ಬೆಲೆಯಲ್ಲಿ ಏರಿಳಿತವೂ ಆಗುತ್ತಿದೆ.  ಕೇಂದ್ರ ಸರ್ಕಾರ ಬಂಗಾರದ ಮಳಿಗೆಗಳ ಮೇಲೆ ಶುಲ್ಕ ವಿಧಿಸುವ ಚಿಂತನೆ ಮಾಡಿದೆ ಎನ್ನಲಾಗಿತ್ತು. ಆದರೆ  ಇಂತಹ ಯೋಜನೆ ಜಾರಿ ಮಾಡುವ ಯಾವುದೇ ಪ್ರಸ್ತಾವ ನಮ್ಮ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.  ಈ ಸಂದರ್ಭದಲ್ಲಿ ಬಂಗಾರದ ಮೇಲೆ ಹೂಡಿಕೆ ಸುರಕ್ಷಿತವೇ ಎಂಬ ಅನುಮಾನ ಹುಟ್ಟಿ ಹಾಕಿದೆ. 

ಕಳೆದ ಒಂದು ವರ್ಷದಲ್ಲಿ ಬಂಗಾರದ ಬೆಲೆಯಲ್ಲಿ ಸರಿ ಸುಮಾರು 7 ಸಾವಿರ ರೂ. ಏರಿಕೆ ಆಗಿದೆ.  ಮುಂಬರುವ  ವರ್ಷದ ಆರಂಭದಲ್ಲಿ ಬಂಗಾರದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಆಗುವ ಭವಿಷ್ಯವನ್ನು ಹೂಡಿಕೆ ತಜ್ಞರು ನುಡಿದಿದ್ದಾರೆ.  ಪ್ರಸ್ತುತ 10 ಗ್ರಾಂ ಶುದ್ಧ ಅಂದರೆರ 24 ಕ್ಯಾರೆಟ್​​​​ ಬಂಗಾರದ ಬೆಲೆ 39,240 ರೂ ಇದೆ.   

ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಿನ್ನದಲ್ಲಿ ಹೂಡಿಕೆ ಮಾಡುವುದರಿಂದ ಅಲ್ಪಾವಧಿಯಲ್ಲಿ ಮತ್ತು ದೀರ್ಘಾವಧಿಯಲ್ಲಿ ಉತ್ತಮ ಲಾಭ ದೊರೆಯುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಆಗಾಗ ಕೆಲವು ಏರಿಳಿತಗಳು ಕಂಡು ಬರುವುದು ಕಾಮನ್​. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಉತ್ತಮ. ಇನ್ನು ಬಂಗಾರದ ಇಟಿಎಫ್‌ಗಳಂತಹ ಎಲೆಕ್ಟ್ರಾನಿಕ್ ವಿಧಾನಗಳಲ್ಲಿ ಖರೀದಿಸುವುದರಿಂದ ತೊಂದರೆಯುಂಟಾಗುತ್ತದೆ ಎಂಬ ಬಗ್ಗೆ ಹೂಡಿಕೆ ತಜ್ಞರು ಎಚ್ಚರಿಕೆಯನ್ನೂ ನೀಡಿದ್ದಾರೆ. 

ಷೇರು ಮಾರುಕಟ್ಟೆಯ ಏರಿಳಿತದ ದೃಷ್ಟಿಯಿಂದ ಪ್ರಸ್ತುತ ಸನ್ನಿವೇಶದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಜನರು ಮತ್ತು ಸರ್ಕಾರಗಳು ಆರ್ಥಿಕ ಹಿಂಜರಿತದ ಭಯದಿಂದ ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಖರೀದಿಸುತ್ತಿದ್ದಾರೆ ಎಂದು  ತಜ್ಞರು  ಹೇಳುತ್ತಾರೆ. 

ಇದೇನೇ ಇದ್ದರು ಬಂಗಾರದ ಮೇಲೆ ಹೂಡಿಕೆ ಮಾಡುವವರು ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳ್ಳೆಯದು. ಪ್ರಸ್ತುತ ಷೇರು ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಹಾಗೂ ಆರ್ಥಿಕ ಹಿಂಜರಿತದ ಈ ದಿನಗಳಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತ ಎನ್ನಲಾಗಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.