ನವದಹೆಲಿ: ಅಂತಾರಾಷ್ಟ್ರೀಯ ಪ್ರವೃತ್ತಿ ಅನುಸರಿಸಿದ ದೇಶಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಗಳು ಇಂದು ಕೂಡ ಏರಿಕೆಯಾಗಿದ್ದು, 10 ಗ್ರಾಂಗೆ ಮೇಲೆ 222 ರೂ.(0.47) ಏರಿಕೆಯಾಗಿ 47,180 ರೂ.ತಲುಪಿದೆ. ಜನ ಚಿನ್ನದ ಖರೀದಿಸಿ ಹೆಚ್ಚು ಆಸಕ್ತಿ ತೋರುತ್ತಿರುವುದರಿಂದ ಚಿನ್ನದ ಬೆಲೆ ಏರಿಕೆಗೆ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಔನ್ಸ್‌ಗೆ 1,791 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಅಮೆರಿಕದ ಬಾಂಡ್ ಗಳಿಕೆ ಕಡಿಮೆ ಆಗಿರುವುದರಿಂದ ಚಿನ್ನದ ದರ ಏರಿಕೆ ಆಗಿದೆ. ಯುಎಸ್ ಫೆಡರಲ್ ರಿಸರ್ವ್ 2023 ರಲ್ಲಿ ಬಡ್ಡಿದರಗಳನ್ನು ಹೆಚ್ಚಿಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆ ಮೇಲೆ ಪರಿಣಾಮ ಬೀರಿದೆ.