ನವದೆಹಲಿ : ದೇಶದ ಚಿನಿವಾರ ಪೇಟೆ ಆಭರಣ ಪ್ರಿಯರಿಗೆ ಸಹಿ ಸುದ್ದಿ ನೀಡಿದೆ. ಚಿನ್ನದ ಬೆಲೆ ಕುಸಿತವಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 43 ರೂಪಾಯಿ ಇಳಿಕೆಯಾಗಿದೆ. 47,871 ರೂ. ಮಾರಾಟ ಆಗುತ್ತಿದೆ. ಬೆಳ್ಳಿ 1 ಕೆಜಿಗೆ 61,194 ರೂಪಾಯಿ ಇದ್ದು, 76 ರೂ.ಕಡಿತವಾಗಿದೆ.
ಕೋವಿಡ್‌ನ ಹೊಸ ರೂಪಾಂತರಿ ಒಮಿಕ್ರಾನ್ ಹರಡುತ್ತಿರುವ ಭೀತಿಯಿಂದ ವಿವಾಹಗಳಿಗೆ ಚಿನ್ನ ಖರೀದಿಸುವುದಕ್ಕೆ ಜನ ಹಿಂದೇಟು ಹಾಕುತ್ತಿರುವುದೇ ದರ ಕಡಿಮೆಯಾಗುತ್ತಿರುವುದಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಚಿನ್ನಕ್ಕೆ 44,760 ರೂಪಾಯಿ ಇದ್ದರೆ, ಕೆಜಿ ಬೆಳ್ಳಿಗೆ 61,200 ರೂಪಾಯಿ ಇದೆ. ಇನ್ನು, ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,910 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 51,170 ರೂಪಾಯಿ ಇದೆ.
ಕೆಜಿ ಬೆಳ್ಳಿ ಬೆಲೆ 61.500 ರೂಪಾಯಿ ಇದೆ. ನೆರೆಯ ಚೆನ್ನೈನಲ್ಲಿ ಈ ಬೆಲೆಗಳು ಕ್ರಮವಾಗಿ 46,910 ರೂ., 51,170 ರೂ. ಹಾಗೂ 61,500 ರೂಪಾಯಿ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸ್ಥಿರವಾಗಿದೆ.
ಇದನ್ನೂ ಓದಿ: ಉದ್ಯೋಗಿಗಳ ಭವಿಷ್ಯ ನಿಧಿ: 22.55 ಕೋಟಿ ಖಾತೆದಾರರಿಗೆ ಶೇ 8.50 ಬಡ್ಡಿ ಜಮೆ