ETV Bharat / business

ಕೊಂಚ ನಿರಾಳ-  694 ರೂ. ತಗ್ಗಿದ ಬಂಗಾರ: ಪ್ರತಿ 10 ಗ್ರಾಂ.ಗೆ ಬೆಲೆಯೆಷ್ಟು ಗೊತ್ತೇ? - ಬೆಳ್ಳಿ ಬೆಲೆ

ದೆಹಲಿಯಲ್ಲಿ 24 ಕ್ಯಾರೆಟ್‌ ಸ್ಪಾಟ್ ಚಿನ್ನದ ಬೆಲೆ ರೂಪಾಯಿ ಮೌಲ್ಯ ಏರಿಕೆಯ ಮಧ್ಯೆಯೂ 694 ರೂ. ಕುಸಿದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.

Gold
ಚಿನ್ನ
author img

By

Published : Oct 7, 2020, 5:31 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಚಿನ್ನದ ಬೆಲೆ ಪ್ರತಿ 10 ಗ್ರಾಂ. ಮೇಲೆ 694 ರೂ.ಯಷ್ಟು ಕುಸಿದಿದ್ದು, 51,215 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಅಮೂಲ್ಯವಾದ ಲೋಹವು ಹಿಂದಿನ ವಹಿವಾಟಿನಲ್ಲಿ 10 ಗ್ರಾಂ.ಗೆ 51,909 ರೂ.ಯಲ್ಲಿ ವಹಿವಾಟು ನಡೆಸಿತ್ತು. ಬೆಳ್ಳಿ ಧಾರಣೆಯು ಹಿಂದಿನ ವಹಿವಾಟಿನಲ್ಲಿ ಪ್ರತಿ ಕೆ.ಜಿ.ಗೆ 63,301 ರೂ. ಮಾರಾಟವಾಗಿ ಇಂದು 126 ರೂ. ಹೆಚ್ಚಳವಾಗಿದೆ.

ದೆಹಲಿಯಲ್ಲಿ 24 ಕ್ಯಾರೆಟ್‌ ಸ್ಪಾಟ್ ಚಿನ್ನದ ಬೆಲೆ ರೂಪಾಯಿ ಮೌಲ್ಯ ಏರಿಕೆಯ ಮಧ್ಯೆಯೂ 694 ರೂ. ಕುಸಿದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.

ಸತತ ಎರಡು ದಿನಗಳ ಸೋಲಿನ ಹಾದಿಯಿಂದ ಮರುಳಿದ ರೂಪಾಯಿ ಮೌಲ್ಯ, ಡಾಲರ್​ ವಿರುದ್ಧ ಇಂದು 13 ಪೈಸೆ ವೃದ್ಧಿಸಿಕೊಂಡಿದೆ. ಯುಎಸ್ ಡಾಲರ್ ವಿರುದ್ಧ ಬುಧವಾರ 73.33 ರೂ.ಗೆ ಸ್ಥಿರವಾಯಿತು. ಸಕಾರಾತ್ಮಕ ದೇಶೀಯ ಷೇರುಗಳ ವಹಿವಾಟು ಮತ್ತು ವಿದೇಶಿ ನಿಧಿಯ ಒಳಹರಿವಿನಿಂದ ಚೇತರಿಕೆ ಕಂಡಿತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಪ್ರತಿ ಔನ್ಸ್‌ಗೆ 1,892 ಡಾಲರ್‌ ಮತ್ತು ಬೆಳ್ಳಿ ಔನ್ಸ್‌ಗೆ 23.73 ಡಾಲರ್‌ನಲ್ಲಿ ಮಾರಾಟ ಆಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.