ETV Bharat / business

ಆಭರಣ ಪ್ರಿಯರಿಗೆ ಶಾಕಿಂಗ್..! ಲಾಕ್​ಡಾನ್ ಬಳಿಕ ಚಿನ್ನದ ದರ ಎಷ್ಟಾಗಲಿದೆ ಗೊತ್ತೆ?

ಎಂಸಿಎಕ್ಸ್ ಜೂನ್​ನಲ್ಲಿ ಚಿನ್ನದ ದರವು ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಬಹುದು. ಸ್ಪಾಟ್ ಗೋಲ್ಡ್​ 1,720 ಡಾಲರ್​ ವಹಿವಾಟು ನಡೆಸುತ್ತಿದ್ದು, ಇದು 8 ವರ್ಷಗಳ ಗರಿಷ್ಠ ದರವಾಗಿದೆ ಎಂದು ಏಂಜಲ್ ಬ್ರೋಕಿಂಗ್‌ನ ಅನುಜ್ ಗುಪ್ತಾ ಹೇಳಿದ್ದಾರೆ.

Gold rate
ಚಿನ್ನದ ದರ
author img

By

Published : Apr 15, 2020, 4:35 PM IST

ಮುಂಬೈ: ಮಲ್ಟಿ- ಕಮೋಡಿಟಿ ಎಕ್ಸ್​ಚೇಂಜ್​ನಲ್ಲಿ (ಎಂಸಿಎಕ್ಸ್) ಚಿನ್ನದ ಭವಿಷ್ಯ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ. ಈ ಹಿಂದಿನ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 46,785 ರೂ. ದಾಟಲಿದೆ.

ಕೊರೊನಾ ವೈರಸ್​ ಬಿಕ್ಕಟ್ಟಿನ ಮಧ್ಯೆ ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಅನಿಶ್ಚಿತತೆಯಿಂದಾಗಿ ಚಿನ್ನದ ಬೆಲೆಗಳು ತಡವಾಗಿ ಗಗನಕ್ಕೇರಿವೆ.

ಎಂಸಿಎಕ್ಸ್ ಜೂನ್​ನಲ್ಲಿ ಚಿನ್ನದ ದರವು ತನ್ನ ಸಾರ್ವಕಾಲಿಕ ಗರಿಷ್ಠ ಮುಟ್ಟಿಕ್ಕೆ ತಲುಪಬಹುದು. ಸ್ಪಾಟ್ ಗೋಲ್ಡ್​ 1,720 ಡಾಲರ್​ ವಹಿವಾಟು ನಡೆಸುತ್ತಿದ್ದು, ಇದು 8 ವರ್ಷಗಳ ಗರಿಷ್ಠ ದರವಾಗಿದೆ ಎಂದು ಏಂಜಲ್ ಬ್ರೋಕಿಂಗ್‌ನ ಅನುಜ್ ಗುಪ್ತಾ ಹೇಳಿದ್ದಾರೆ.

ಹೂಡಿಕೆದಾರರ ಸುರಕ್ಷತೆ ದೃಷ್ಟಿಯ ಬೇಡಿಕೆ ಮತ್ತು ಡಾಲರ್‌ ಮೌಲ್ಯದ ದೌರ್ಬಲ್ಯವು ಚಿನ್ನದ ಬೆಲೆ ಏರಿಕೆಗೆ ಬೆಂಬಲವಾಗಿ ನಿಲುತ್ತಿದೆ. ಲಾಕ್‌ಡೌನ್ ಪರಿಸ್ಥಿತಿಯು ಸುರಕ್ಷಿತ ತಾಣದ ಸ್ವತ್ತಿನ ಉತ್ಪನ್ನದಲ್ಲಿ ಹೂಡಿಕೆಯ ಬೇಡಿಕೆ ಹೆಚ್ಚಿಸಿದೆ. ಕಡಿಮೆ ಬಡ್ಡಿದರ ಮತ್ತು ಐಎಂಎಫ್ ಕಡಿತಗೊಳಿಸಿದ ಜಾಗತಿಕ ಬೆಳವಣಿಗೆಯ ಮುನ್ಸೂಚನೆಯು ಚಿನ್ನದ ಬೆಲೆಗಳಿಗೆ ಹೆಚ್ಚುವರಿ ಪುಷ್ಠಿನೀಡಿದೆ ಎಂದು ಗುಪ್ತಾ ವಿಶ್ಲೇಷಿಸಿದ್ದಾರೆ.

ಎಂಸಿಎಕ್ಸ್‌ನಲ್ಲಿ ಚಿನ್ನವು 49,000 ರಿಂದ 50,000 ರೂ. ಮುಟ್ಟಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೀಘ್ರವೇ 1,780-1,800 ಡಾಲರ್​​ಗೆ ತಲುಪಬಹುದು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.