ನವದೆಹಲಿ: ಜಾಗತಿಕ ಚಿನ್ನದ ಬೆಲೆಯಲ್ಲಿನ ಲಾಭದ ಪ್ರತಿಬಿಂಬಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಪ್ರತಿ 10 ಗ್ರಾಂ. ಬಂಗಾರ ದರದ ಮೇಲೆ 337 ಹೆಚ್ಚಳವಾಗಿ 46,372 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನ ಅವಧಿಯಲ್ಲಿ ಅಮೂಲ್ಯವಾದ ಲೋಹದ ಬೆಲೆ 10 ಗ್ರಾಂ.ಗೆ ಗರಿಷ್ಠ 46,035 ರೂ.ಯಲ್ಲಿ ಮಾರಾಟ ಆಗಿತ್ತು. ಬೆಳ್ಳಿ ಸಹ ಪ್ರತಿ ಕೆ.ಜಿ.ಗೆ 1,149 ರೂ. ಹೆಚ್ಚಳವಾಗಿ 69,667 ರೂ.ಗೆ ಏರಿಕೆಯಾಗಿದೆ. ಈ ಹಿಂದಿನ ವಹಿವಾಟಿನಲ್ಲಿ ಪ್ರತಿ ಕೆ.ಜಿ. 68,518 ರೂ.ಯಲ್ಲಿ ಖರೀದಿಯಾಗಿತ್ತು.
ಇದನ್ನೂ ಓದಿ: ಗೋಲ್ಡ್ ಲೋನ್ ತೆಗೆದುಕೊಳ್ಳುವ ಮೊದಲು ಈ ಅಂಶಗಳನ್ನು ಮರೆಯದೇ ನೆನಪಿಡಿ..!
ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಗಳ ಮೇಲೆ 337 ರೂ. ಹೆಚ್ಚಳದೊಂದಿಗೆ ವಹಿವಾಟು ನಡೆಸಿದ್ದು, ಜಾಗತಿಕ ಚಿನ್ನದ ಬೆಲೆಯಲ್ಲಿನ ರಾತ್ರಿಯ ಲಾಭವನ್ನು ಪ್ರತಿಬಿಂಬಿಸುತ್ತವೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಈಗ ಔನ್ಸ್‌ಗೆ 1,808 ಡಾಲರ್‌ಗೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 28.08 ಡಾಲರ್‌ಗೆ ತಲುಪಿದೆ.