ನವದೆಹಲಿ: ಅಂತಾರಾಷ್ಟ್ರೀಯ ಬೆಲೆಯಲ್ಲಿ ಏರಿಕೆಯ ನಂತರ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಮೇಲೆ 244 ರೂ. ಏರಿಕೆಯಾಗಿದೆ.
ಮಂಗಳವಾರದ ವಹಿವಾಟಿನಂದು ಪ್ರತಿ 10 ಗ್ರಾಂ. ಚಿನ್ನದ ಬೆಲೆಯ ಮೇಲೆ 114 ರೂ.ಯಷ್ಟು ಇಳಿಕೆಯಾಗಿ 49,996 ರೂ.ಗೆ ತಲುಪಿತ್ತು. ಇಂದು 244 ರೂ. ಹೆಚ್ಚಳದ ಮೂಲಕ
50,230 ರೂ.ಗೆ ಏರಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಖರೀದಿಯ ಭರಾಟೆಯಿಂದ ಬೆಳ್ಳಿಯ ದರದಲ್ಲಿ ಏರಿಕೆ ಕಂಡುಬಂದಿದೆ. ಪ್ರತಿ ಕೆ.ಜಿ. ಬೆಳ್ಳಿ ಮೇಲೆ 673 ರೂ.ಯಷ್ಟು ಹೆಚ್ಚಳವಾಗಿದೆ. ಮಂಗಳವಾರ 53,527 ರೂ. ಇದ್ದದ್ದು 54,200 ರೂ.ಗೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನವು 1,813 ಡಾಲರ್‌ಗೆ ತಲುಪಿದೆ. ಔನ್ಸ್ ಬೆಳ್ಳಿಯ ಧಾರಣೆ 19.35 ಡಾಲರ್‌ನಷ್ಟಿದೆ.