ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಚಿನ್ನವು 10 ಗ್ರಾಂ.ಗೆ 97 ರೂ. ಹೆಚ್ಚಳವಾಗಿ 46,758 ರೂ.ಗೆ ತಲುಪಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ 46,661 ರೂ.ಯಲ್ಲಿ ವಹಿವಾಟು ನಡೆಸಿತ್ತು. ಇಂದು 97 ರೂ. ಏರಿಕೆಯಾಗಿ 46,758 ರೂ.ಗೆ ತಲುಪಿದೆ. ಬೆಳ್ಳಿ ಕೂಡ ಪ್ರತಿ ಕೆ.ಜಿ.ಯು ನಿನ್ನೆಯ 68,988 ರೂ. ಮೇಲೆ 1,282 ರೂ. ಹೆಚ್ಚಳವಾಗಿ 70,270 ರೂ.ಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್ಗೆ 1,788 ಡಾಲರ್ ಮತ್ತು ಬೆಳ್ಳಿ ಔನ್ಸ್ಗೆ 26.90 ಡಾಲರ್ನಲ್ಲಿ ಸಮತಟ್ಟಾಗಿದೆ.
ಚಿನ್ನದ ಬೆಲೆಗಳು ಮಂಗಳವಾರ ಕಾಮೆಕ್ಸ್ (ನ್ಯೂಯಾರ್ಕ್ ಮೂಲದ ಸರಕುಗಳ ವಿನಿಮಯ) ವಹಿವಾಟಿನಲ್ಲಿ ಸ್ಪಾಟ್ ಬೆಲೆಯೊಂದಿಗೆ ಔನ್ಸ್ 1,788 ಡಾಲರ್ನ ಸ್ವಲ್ಪ ಕೆಳಮಟ್ಟದಲ್ಲಿ ವಹಿವಾಟು ನಡೆಸಿದೆ ಎಂದು ಎಚ್ಪಿಎಫ್ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.