ನವದೆಹಲಿ : ಕೆಲ ದಿನಗಳಿಂದ ಇಳಿಕೆ ಕಾಣುತ್ತಿದ್ದ ಬಂಗಾರದ ದರದಲ್ಲಿ ಮತ್ತೆ ಏರಿಕೆಯಾಗಿದೆ. ಇಂದು ಪ್ರತಿ ಗ್ರಾಮ್ಗೆ ₹94 ಏರಿಕೆ ಕಂಡು 10 ಗ್ರಾಮ್ಗೆ 46,877 ರೂಪಾಯಿಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಚೇತರಿಸಿಕೊಂಡಿದ್ದು, ಈ ಹಿನ್ನೆಲೆ ದೇಶೀಯ ಮಟ್ಟದಲ್ಲೂ ಬೆಲೆ ಏರಿಕೆಯಾಗಿದೆ.
ಇದಲ್ಲದೆ ಬೆಳ್ಳಿಯ ದರದಲ್ಲೂ ಏರಿಕೆ ಸಾಧಿಸಿದ್ದು, 10 ಗ್ರಾಮ್ಗೆ 340 ರೂಪಾಯಿ ಏರಿಕೆ ಕಂಡು ಪ್ರತಿ ಕೆಜಿಗೆ 68,391 ರೂಪಾಯಿಗೆ ತಲುಪಿದೆ. ಈ ಹಿಂದೆ ಈ ಮೌಲ್ಯ 68,051 ತಲುಪಿತ್ತು. ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡೂ ಸಹ ಲಾಭದೊಂದಿಗೆ ವಹಿವಾಟು ಆರಂಭಿಸಿದ್ದವು.
ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಉಪಾಧ್ಯಕ್ಷ (ಸರಕುಗಳ ಸಂಶೋಧನೆ) ನವನೀತ್ ದಮಾನಿ ಹೇಳಿದಂತೆ, ನಿರೀಕ್ಷೆಗಿಂತಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಅಲ್ಲದೆ ಡಾಲರ್ ಮೇಲಿನ ಒತ್ತಡದ ಪರಿಣಾಮ ಬೆಳ್ಳಿಯ ಬೇಡಿಕೆ ಸಹ ಹೆಚ್ಚಿದೆ ಎಂದಿದ್ದಾರೆ.
ಇದನ್ನೂ ಓದಿ: 600 ಅಂಕ ಜಿಗಿದ ಸೆನ್ಸೆಕ್ಸ್..15,100 ಕ್ಕೆ ತಲುಪಿದ ನಿಫ್ಟಿ