ನವದೆಹಲಿ: ಜಾಗತಿಕ ಅಮೂಲ್ಯ ಲೋಹದ ದರ ಏರಿಕೆಗೆ ಅನುಗುಣವಾಗಿ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನವು ಪ್ರತಿ 10 ಗ್ರಾಂ.ಗೆ 333 ರೂ. ಏರಿಕೆ ಕಂಡು 47,833 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ 47,500 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಇಂದು 333 ರೂ.ಯಷ್ಟು ಹೆಚ್ಚಳವಾಗಿದೆ. ಬೆಳ್ಳಿ ಸಹ ಪ್ರತಿ ಕಿಲೋಗ್ರಾಂಗೆ 71,101 ರೂ. ಮೇಲೆ 2,021 ರೂ. ಏರಿಕೆಯಾಗಿ 73,122 ರೂ.ಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,869 ಡಾಲರ್‌ಗೆ ತಲುಪಿ ಗ್ರೀನ್ ಕಲರ್ನಲ್ಲಿ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 28.48 ಡಾಲರ್‌ಗೆ ಸಮತಟ್ಟಾಗಿ ವಹಿವಾಟು ನಡೆಸುತ್ತಿದೆ.
ಚಿನ್ನದ ಬೆಲೆಯನ್ನು ದುರ್ಬಲ ಡಾಲರ್ ಬೆಂಬಲಿಸಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್, ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.