ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೂಲ್ಯ ಲೋಹದ ನಡೆ ಅನುಸರಿಸಿದ ಬಳಿಕ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ. ಚಿನ್ನದ ಮೇಲೆ 198 ರೂ.ಯಷ್ಟು ಏರಿಕೆಯಾಗಿ 48,480 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಇದು 10 ಗ್ರಾಂ.ಗೆ 48,282 ರೂ.ಯಲ್ಲಿ ಖರೀದಿ ಆಗುತ್ತಿತ್ತು. ಕಳೆದ ವಹಿವಾಟಿನಲ್ಲಿ ಬೆಳ್ಳಿ ಪ್ರತಿ ಕೆಜಿ 64,332 ರೂ.ಯಿಂದ 1,008 ರೂ.ಯಷ್ಟು ಹೆಚ್ಚಾಗಿ 65,340 ರೂ.ಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಕ್ರಮವಾಗಿ ಔನ್ಸ್‌ಗೆ 1,843 ಮತ್ತು 25.28 ಡಾಲರ್‌ಗಳಲ್ಲಿ ಮಾರಾಟ ಆಗುತ್ತಿವೆ.
ಇದನ್ನೂ ಓದಿ: ನಾಗಾಲೋಟದಲ್ಲಿ ಗೂಳಿ: ಭರ್ಜರಿ 834 ಅಂಕ ಗಳಿಸಿದ ಸೆನ್ಸೆಕ್ಸ್