ನವದೆಹಲಿ: ಜಾಗತಿಕ ಪ್ರವೃತ್ತಿಗಳ ನಂತರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನವು 119 ರೂ. ಏರಿಕೆಯಾಗಿ 10 ಗ್ರಾಂ. ದರ 47,995 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ 47,876 ರೂ.ಯಷ್ಟಿತ್ತು. 47,995 ರೂ. ಆಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಪ್ರತಿ ಕೆ.ಜಿ ಬೆಳ್ಳಿ ಹಿಂದಿನ ವಹಿವಾಟಿನ 71,256 ರೂ. ಮೇಲೆ 258 ರೂ. ಇಳಿದು 70,998 ರೂ.ಗೆ ತಲುಪಿದೆ.
ಓದಿ: ರೈಲ್ವೆ ಪ್ರಯಾಣಿಕರ ಗಮನಕ್ಕೆ! ಈ ರಾಜ್ಯಗಳ ಪ್ಯಾಸೆಂಜರ್ಗಳಿಗೆ RTPCR ನೆಗೆಟಿವ್ ವರದಿ ಕಡ್ಡಾಯ
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್, ದೆಹಲಿಯಲ್ಲಿ 24 ಕ್ಯಾರೆಟ್‌ಗಳ ಸ್ಪಾಟ್ ಚಿನ್ನದ ಬೆಲೆ 119 ರೂ.ಗೆ ಏರಿಕೆಯಾಗಿದ್ದು, ಧನಾತ್ಮಕ ಜಾಗತಿಕ ಚಿನ್ನದ ಬೆಲೆಯೊಂದಿಗೆ ಸಾಗುತ್ತಿದೆ ಎಂದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,877 ಡಾಲರ್‌ಗಳಷ್ಟು ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 27.68 ಡಾಲರ್‌ಗೆ ಸಮತಟ್ಟಾಗಿದೆ.