ನವದೆಹಲಿ: ಅಂತಾರಾಷ್ಟ್ರೀಯ ಪ್ರವೃತ್ತಿ ಅನುಸರಿಸಿದ ದೇಶಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಮಂಗಳವಾರ ಇಳಿಕೆಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ. ಚಿನ್ನದ ಮೇಲೆ 557 ರೂ. ಇಳಿಕೆಯಾಗಿ 52,350 ರೂ. ತಲುಪಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂ.ಗೆ 52,907 ರೂ.ಯಲ್ಲಿ ವಹಿವಾಟು ನಡೆಸಿತ್ತು. ದೆಹಲಿಯಲ್ಲಿ 24 ಕ್ಯಾರೆಟ್ ಸ್ಪಾಟ್ ಚಿನ್ನದ ಬೆಲೆಗಳು ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಏರಿಕೆಯ ವಹಿವಾಟು ನಡೆಸಿತು. 10 ಗ್ರಾಂ. ಚಿನ್ನದ ಮೇಲೆ 557 ರೂ.ಯಷ್ಟು ಕುಸಿತ ಕಂಡುಬಂದಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.
ದಿನದ ವಹಿವಾಟಿನಲ್ಲಿ ರೂಪಾಯಿ ತನ್ನ ಆರಂಭಿಕ ಲಾಭ ಗಳಿಸಿತು. ಮಂಗಳವಾರ ಯುಎಸ್ ಡಾಲರ್ ವಿರುದ್ಧ 74.33 ರೂ. ಮೌಲ್ಯದಲ್ಲಿ ಸ್ಥಿರವಾಗಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್ ಚಿನ್ನವು 1,930 ಡಾಲರ್ ಮಾರಾಟ ಆಗುತ್ತಿದ್ದರೇ ಔನ್ಸ್ ಬೆಳ್ಳಿ 26.45 ಡಾಲರ್‌ನಲ್ಲಿದೆ.
ಚಿನ್ನದ ಬೆಲೆಗಳು ದುರ್ಬಲ ಡಾಲರ್‌ನಲ್ಲಿ ಸ್ಥಿರವಾಗಿ ವಹಿವಾಟು ನಡೆಸುತ್ತವೆ. ಏಷ್ಯಾ ಮತ್ತು ಯುರೋಪಿನಲ್ಲಿ ಹೆಚ್ಚುತ್ತಿರುವ ವೈರಸ್ ಪ್ರಕರಣಗಳು, ಅಮೆರಿಕ-ಚೀನಾ ನಡುವಿನ ವ್ಯಾಪಾರ ಮಾತುಕತೆ ಪುನರಾರಂಭದ ಚಿಹ್ನೆಗಳ ಬಗ್ಗೆ ಸಕಾರಾತ್ಮಕ ಭಾವನೆಗಳು ಚಿನ್ನದ ಬೆಲೆಯನ್ನು ಕೆಳಮುಖವಾಗಿಸಿವೆ ಎಂದು ವಿಶ್ಲೇಷಿಸಿದರು.