ನವದೆಹಲಿ: ದುರ್ಬಲ ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಚಿನ್ನವು ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ 10 ಗ್ರಾಂ ಮೇಲೆ 152 ರೂ. ಇಳಿದು 48,107 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ 48,259 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಇಂದು 152 ರೂ.ಯಷ್ಟು ಹೆಚ್ಚಳವಾಗಿ 48,107 ರೂ.ಗೆ ಬಂದು ನಿಂತಿದೆ. ಬೆಳ್ಳಿ ಪ್ರತಿ ಕೆ.ಜಿ. 70,465 ರೂ. ಮೇಲೆ 540 ರೂ.ಯಷ್ಟು ಇಳಿದು 69,925 ರೂ.ಯಲ್ಲಿ ಖರೀದಿ ಆಯಿತು.
ಓದಿ: ಹೋಂಡಾ ಕಾರುಗಳ ಮೇಲೆ 33,496 ರೂ. ತನಕ ಡಿಸ್ಕೌಂಟ್: ಯಾವೆಲ್ಲಾ ಕಾರಿಗೆ ಅನ್ವಯ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,883 ಡಾಲರ್ ಮತ್ತು ಬೆಳ್ಳಿ ಔನ್ಸ್‌ಗೆ 27.55 ಡಾಲರ್‌ನಲ್ಲಿ ಸಮತಟ್ಟಾಗಿದೆ.
ಬಲವಾದ ಡಾಲರ್‌ನಿಂದ ಒತ್ತಡಕ್ಕೊಳಗಾದ ಚಿನ್ನದ ಬೆಲೆಗಳು ಸೋಮವಾರ ಕುಸಿದಿವೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.