ನವದೆಹಲಿ: ರೂಪಾಯಿ ಮೌಲ್ಯ ವೃದ್ಧಿ ಮತ್ತು ಬೇಡಿಕೆ ಕಡಿಮೆಯ ಮಧ್ಯೆಯೂ ಮಂಗಳವಾರದ ವಹಿವಾಟಿನಂದು ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 10 ಗ್ರಾಂ. ಮೇಲೆ 137 ರೂ. ಇಳಿದು 51,108 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ 51,245 ರೂ.ಯಷ್ಟಿತ್ತು. ಬೆಳ್ಳಿ ಪ್ರತಿ ಕೆ.ಜಿ. ಮೇಲೆ 62,173 ರೂ.ಗಳಿಂದ 475 ರೂ.ಯಷ್ಟು ಹೆಚ್ಚಳವಾಗಿ 62,648 ರೂ.ಗೆ ತಲುಪಿದೆ.
ದೆಹಲಿಯಲ್ಲಿ 24 ಕ್ಯಾರೆಟ್ ಸ್ಪಾಟ್ ಚಿನ್ನದ ಬೆಲೆಯು ರೂಪಾಯಿ ಮೌಲ್ಯ ವೃದ್ಧಿಯಿಂದ 137 ರೂ.ಯಷ್ಟು ಕುಸಿದಿದೆ. ಭೌತಿಕ ಬೇಡಿಕೆ ತಗ್ಗಿದ್ದರಿಂದ ಭಾರತದಲ್ಲಿ ಚಿನ್ನದ ಬೆಲೆಗಳು ಒತ್ತಡದಲ್ಲಿ ವಹಿವಾಟು ನಡೆಸಿದವು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.
ರುಪಾಯಿ ಆರಂಭಿಕ ನಷ್ಟದಿಂದ ಹೊರಬಂದು ಅಮೆರಿಕ ಡಾಲರ್ ವಿರುದ್ಧ ಮಂಗಳವಾರ 13 ಪೈಸೆ ಹೆಚ್ಚಳ ಕಂಡು 73.71 ರೂ.ಗೆ ತಲುಪಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್ ಚಿನ್ನವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿ 1,903.6 ಡಾಲರ್ಗೆ ತಲುಪಿದರೇ ಬೆಳ್ಳಿ ಔನ್ಸ್‌ಗೆ 24.48 ಡಾಲರ್‌ಯಷ್ಟಿತ್ತು.