ನವದೆಹಲಿ: ಅಂತಾರಾಷ್ಟ್ರೀಯ ಪ್ರವೃತ್ತಿ ಅನುಸರಿಸಿದ ದೇಶಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಗಳು ಸೋಮವಾರ ಅಲ್ಪ ಇಳಿಕೆ ದಾಖಲಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ. ಚಿನ್ನದ ಮೇಲೆ 44 ರೂ. ಇಳಿಕೆಯಾಗಿ 53,040 ರೂ. ತಲುಪಿದೆ ಎಂದು ಹೆಚ್ಡಿಎಫ್ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂ.ಗೆ 53,084 ರೂ.ಯಲ್ಲಿ ವಹಿವಾಟು ನಡೆಸಿತ್ತು. ದೆಹಲಿಯಲ್ಲಿ 24 ಕ್ಯಾರೆಟ್ ಸ್ಪಾಟ್ ಚಿನ್ನದ ಬೆಲೆಗಳು ರೂಪಾಯಿ ಏರಿಳಿತದೊಂದಿಗೆ ಚಂಚಲ ವಹಿವಾಟು ನಡೆಸಿತು. ಬೆಲೆಗಳು ಆರಂಭಿಕ ಲಾಭಗಳನ್ನು ತೀಕ್ಷ್ಣವಾದ ರೂಪಾಯಿ ಚೇತರಿಕೆ ಕಂಡಿತು ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.
ಫಾರೆಕ್ಸ್ ಪೇಟೆಯಲ್ಲಿ ತೀಕ್ಷ್ಣವಾಗಿ ಯು-ಟರ್ನ್ ಮೂಲಕ ರೂಪಾಯಿ 52 ಪೈಸೆ ಏರಿಕೆಯಾಗಿದ್ದು, ಸೋಮವಾರ ಯುಎಸ್ ಡಾಲರ್ ಎದುರು 74.32 (ತಾತ್ಕಾಲಿಕ) ರೂ.ಗೆ ತಲುಪಿದೆ. ಬೆಳ್ಳಿ ಸಹ ಕೆಜಿ ಮೇಲೆ 206 ರೂ. ಇಳಿಕೆಯಾಗಿ 68,408 ರೂ.ಗಳಿಂದ 68,202 ರೂ.ಗೆ ತಲುಪಿದೆ.
ದೆಹಲಿಯಲ್ಲಿ 24 ಕ್ಯಾರೆಟ್ಗಳ ಸ್ಪಾಟ್ ಚಿನ್ನದ ಬೆಲೆಗಳು ಅಂತಾರಾಷ್ಟ್ರೀಯ ಚಿನ್ನದ ಬೆಲೆಯೊಂದಿಗೆ 1,182 ರೂ.ಯಷ್ಟು ಏರಿಕೆಯಾಗಿದೆ ಎಂದು ಹೆಚ್ಡಿಎಫ್ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್ ಚಿನ್ನವು 1,950ರಲ್ಲಿ ವಹಿವಾಟು ನಡೆಸುತ್ತಿದೆ. ಬೆಳ್ಳಿ ಔನ್ಸ್ಗೆ 26.80 ಡಾಲರ್ನಲ್ಲಿ ಖರೀದಿ ಆಗುತ್ತಿದೆ.