ನವದೆಹಲಿ: ದೇಶಾದ್ಯಂತದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಎರಡು ದಿನಗಳ ವಿರಾಮದ ನಂತರ ಚಿಲ್ಲರೆ ದರದಲ್ಲಿ ಮತ್ತೆ ಏರಿಕೆಯಾಗಿಒದ್ದು, ಗ್ರಾಹಕರ ಜೇಬಿಗೆ ದೊಡ್ಡ ರಂಧ್ರವಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಪಂಪ್ ಬೆಲೆಯನ್ನು ಲೀಟರ್‌ಗೆ 35 ಪೈಸೆ ಹೆಚ್ಚಿಸಿವೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್‌ಗೆ ಈಗ ಲೀಟರ್‌ಗೆ 90.93 ರೂ. ಮತ್ತು ಡೀಸೆಲ್ 81.32 ರೂ.ಯಲ್ಲಿ ಮಾರಾಟ ಆಗುತ್ತಿದೆ.
ಇದನ್ನೂ ಓದಿ: ಮೀಡಿಯಾ & ಎಂಟರ್ಟೈನ್ಮೆಂಟ್ ಆದಾಯ ಶೇ 27 ಏರಿಕೆಯಾಗಿ 1.37 ಲಕ್ಷ ಕೋಟಿ ರೂ.ಗೆ ಜಿಗಿತ
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ರಾಜ್ಯ ಮಟ್ಟದಲ್ಲಿ ಸ್ಥಳೀಯ ತೆರಿಗೆ ಮಟ್ಟ ಅವಲಂಬಿಸಿ ಪ್ರತಿ ಲೀಟರ್‌ಗೆ 32 - 40 ಪೈಸೆ ನಡುವೆ ಹೆಚ್ಚಳವಾಗಿದೆ.
ಮಂಗಳವಾರ ಬೆಲೆ ಏರಿಕೆಯು ಜಾಗತಿಕ ಮಾರುಕಟ್ಟೆಗಳಲ್ಲಿ ತೈಲ ಉತ್ಪನ್ನದ ಬೆಲೆಯಲ್ಲಿನ ಚಲನೆ ಅನುಸರಿಸಿದೆ ಎಂದು ಒಎಂಸಿ ಮೂಲಗಳು ತಿಳಿಸಿವೆ. ಬ್ರೆಂಟ್ ಕಚ್ಚಾ ದರವು ಮಂಗಳವಾರ ಶೇ 2ಕ್ಕಿಂತ ಹೆಚ್ಚಾಗಿದೆ. ಈಗ ಬ್ಯಾರೆಲ್‌ಗೆ 67 ಡಾಲರ್ ತಲುಪಿದೆ. ಕೆಲವು ದಿನಗಳ ಹಿಂದೆಯಷ್ಟೆ ಬ್ಯಾರೆಲ್‌ಗೆ 60 ಡಾಲರ್ಗಿಂತ ಕಡಿಮೆ ಮಟ್ಟದಲ್ಲಿತ್ತು.