ETV Bharat / business

ಅಮೆರಿಕ - ಬಿಹಾರ ಚುನಾವಣೆ ಮೇಲೆ ಕಣ್ಣಿಟ್ಟ ಗೂಳಿ - ಕರಡಿ: ಪೇಟೆ ಕದನದಲ್ಲಿ ಗೆಲ್ಲೋದು ಯಾರು?

author img

By

Published : Oct 28, 2020, 9:11 PM IST

ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ಆ ನಂತರದ ಲಾಕ್​ಡೌನ್​ ಭಾರತದ ಆರ್ಥಿಕತೆ ಮೇಲೆ ಹಿಂದೆಂದಿಗಿಂತಲೂ ಹೆಚ್ಚು ಹಾನಿ ಉಂಟುಮಾಡಿತು. ಇದರ ನಡುವೆಯೂ ದೇಶೀಯ ಷೇರು ಮಾರುಕಟ್ಟೆಗಳು ಪೂರ್ಣ ವಿ - ಆಕಾರದ ಚೇತರಿಕೆ ಪ್ರದರ್ಶಿಸಿದವು. ಲಾಕ್‌ಡೌನ್‌ನ ಆರಂಭಿಕ ತಿಂಗಳಲ್ಲಿ ಕಂಡುಬಂದಿದ್ದ ಎಲ್ಲ ನಷ್ಟಗಳನ್ನು ಸೆನ್ಸೆಕ್ಸ್ ಮತ್ತು ನಿಫ್ಟಿ ಈಗ ಅಳಿಸಿ ಹಾಕಿವೆ.

US election
ಯುಎಸ್​

ಮುಂಬೈ: ಅಂತಾರಾಷ್ಟ್ರೀಯ ವ್ಯವಹಾರಗಳಂತೆ ಭಾರತ ಮತ್ತು ಅಮೆರಿಕ ಸಂಬಂಧವೂ ಪ್ರತಿಫಲದ ಪರಿಣಾಮಗಳನ್ನು ಹೊಂದಿದೆ. ಉಭಯ ರಾಷ್ಟ್ರಗಳ ನಡುವಿನ ವ್ಯೂಹಾತ್ಮಕ ಆರ್ಥಿಕ ಸಹಭಾಗಿತ್ವವು ಕೊರೊನಾ ಮತ್ತು ಅನ್​ಲಾಕ್​ ಹಾಗೂ ಅಧ್ಯಕ್ಷೀಯ ಚುನಾವಣೆ ಮತ್ತು ಬಿಹಾರ ವಿಧಾನಸಭಾ ಚುನಾವಣೆಯಂತಹ ಸಂಗತಿಗಳು ದೇಶಿಯ ಆರ್ಥಿಕತೆ ಹಾಗೂ ಮಾರುಕಟ್ಟೆಗಳ ಪರಿಣಾಮ ಬೀರಲಿವೆ.

ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ಆ ನಂತರದ ಲಾಕ್​ಡೌನ್​ ಭಾರತದ ಆರ್ಥಿಕತೆಯ ಮೇಲೆ ಹಿಂದೆಂದಿಗಿಂತಲೂ ಹೆಚ್ಚು ಹಾನಿ ಉಂಟುಮಾಡಿತು. ಇದರ ನಡುವೆಯೂ ದೇಶೀಯ ಷೇರು ಮಾರುಕಟ್ಟೆಗಳು ಪೂರ್ಣ ವಿ - ಆಕಾರದ ಚೇತರಿಕೆ ಪ್ರದರ್ಶಿಸಿದವು. ಲಾಕ್‌ಡೌನ್‌ನ ಆರಂಭಿಕ ತಿಂಗಳಲ್ಲಿ ಕಂಡು ಬಂದಿದ್ದ ಎಲ್ಲ ನಷ್ಟಗಳನ್ನು ಸೆನ್ಸೆಕ್ಸ್ ಮತ್ತು ನಿಫ್ಟಿ ಈಗ ಅಳಿಸಿ ಹಾಕಿವೆ.

ಈಗ ನಡೆಯುತ್ತಿರುವುದು ಏನು?

ಆರಂಭಿಕ ಕೋವಿಡ್ ಆಘಾತದಿಂದ ಷೇರು ಮಾರುಕಟ್ಟೆಗಳು ಚೇತರಿಸಿಕೊಂಡಿವೆ ಎಂಬಂತೆ ಕಾಣುತ್ತಿದೆ. ಆದರೆ, ಈಕ್ವಿಟಿ ಸೂಚ್ಯಂಕಗಳು ಸಮೀಪದಿಂದ ಮಧ್ಯಮ ಅವಧಿಗೆ ಹಾನಿ ಆಗುವ ಹಲವು ಅಂಶಗಳು ಇನ್ನೂ ಜೀವಂತವಾಗಿವೆ.

ಮುಂಬರುವ ತಿಂಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಮೇಲೆ ಪ್ರಭಾವ ಬೀರುವ ಐದು ಅಂಶಗಳು ಹೀಗಿವೆ

1) ಅಮೆರಿಕ ಅಧ್ಯಕ್ಷೀಯ ಚುನಾವಣೆ

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವುದರಿಂದ ಜಾಗತಿಕ ಮಾರುಕಟ್ಟೆಗಳು ಅದಕ್ಕಾಗಿ ಎದುರು ನೋಡುತ್ತಿವೆ. ಆದರೆ, ಚುನಾವಣಾ ಫಲಿತಾಂಶದ ನಂತರವೂ ತಜ್ಞರು ದೀರ್ಘಕಾಲದ ಚಂಚಲತೆ ಕಾಣಲಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

US
ಬಿಡನ್- ಟ್ರಂಪ್

(ಡೊನಾಲ್ಡ್) ಟ್ರಂಪ್ ಅವರು ಅಂಚೆ ಮತದಾನ ಪ್ರಕ್ರಿಯೆಯ ಬಗ್ಗೆ ತಮ್ಮ ಸಂದೇಹವನ್ನು ಘೋಷಿಸಿದ್ದಾರೆ. ಒಂದು ವೇಳೆ, ಅವರು ಸೋತರೇ ಚುನಾವಣಾ ಫಲಿತಾಂಶ ತೀವ್ರವಾಗಿ ಸ್ಪರ್ಧೆಯೊಡ್ಡುವ ಸಾಧ್ಯತೆಯಿದೆ. ಚುನಾವಣಾ ಫಲಿತಾಂಶಗಳು ಚುನಾವಣೆಯ ನಂತರದವರೆಗೂ ಅದು ಹಾಗೆಯೇ ಉಳಿಯುವಂತಹದ್ದು ಎಂದು ಎಚ್‌ಡಿಎಫ್‌ಸಿ ಬ್ಯಾಂಕಿನ ಖಜಾನೆ ಆರ್ಥಿಕ ಸಂಶೋಧನಾ ತಂಡದ ಹಿರಿಯ ಅರ್ಥಶಾಸ್ತ್ರಜ್ಞ ಸಾಕ್ಷಿ ಗುಪ್ತಾ ಹೇಳಿದ್ದಾರೆ.

ಅಮೆರಿಕ ಮತದಾನ ವ್ಯವಸ್ಥೆಯಲ್ಲಿ ದೀರ್ಘಕಾಲದ ದಾವೆ. ಅಂತಿಮವಾಗಿ ಎರಡನೇ ಸುತ್ತಿನ ಉತ್ತೇಜನೆ ವಿಳಂಬಗೊಳಿಸುತ್ತದೆ. ಜಾಗತಿಕ ಮಾರುಕಟ್ಟೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರುವ ಮುಂದಿನ ದ್ರವ್ಯತೆಯ ಅಲೆಯನ್ನು ಮತ್ತಷ್ಟು ಮುಂದೂಡುತ್ತಿದೆ. ಭಾರತದಲ್ಲಿ ಸ್ಥಳೀಯ ಮಾರುಕಟ್ಟೆಗಳೂ ಸಹ ಲಾಭದ ಬುಕ್ಕಿಂಗ್​ ಅನ್ನು ಸದ್ಯದಲ್ಲಿಯೇ ಕಾಣಬಹುದು ಎಂದು ಇತ್ತೀಚೆಗೆ ಬಿಡುಗಡೆಯಾದ ಮಾರ್ಕೆಟ್​ ಔಟ್​ಲುಕ್​ ವರದಿಯಲ್ಲಿ ಸಹ ಸ್ಯಾಮ್ಕೊ ಸೆಕ್ಯುರಿಟೀಸ್ ಲಿಮಿಟೆಡ್ ಹೇಳಿದೆ.

2) ಕೊರೊನಾ ವೈರಸ್ ಸೋಂಕು ಏರಿಕೆ

ಕಳೆದ ಒಂದು ತಿಂಗಳಿಂದ ಯುರೋಪಿನಲ್ಲಿ ಕೋವಿಡ್ -19 ಸೋಂಕಿನ ಪ್ರಕರಣಗಳ ಏರಿಕೆಯಾಗುತ್ತಿವೆ. ಆರ್ಥಿಕ ಕುಸಿತದ ಸಂಭವನೀಯ ಆತಂಕಗಳ ನಡುವೆ ವಿಶ್ವಾದ್ಯಂತ ಈಕ್ವಿಟಿ ಮಾರುಕಟ್ಟೆಗಳು ಈಗಾಗಲೇ ಎಚ್ಚರಿಕೆ ಹೆಜ್ಜೆ ಇರಿಸುತ್ತಿವೆ.

ವಿಶ್ಲೇಷಕರ ಪ್ರಕಾರ, ಮುಂದುವರಿದ ರಾಷ್ಟ್ರಗಳಲ್ಲಿ ಹೆಚ್ಚಿನ ನಿರ್ಬಂಧಗಳು ಹೇರುವುದರಿಂದ ದೇಶೀಯ ಮಾರುಕಟ್ಟೆಗಳಿಗೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ. ಇದು ನಿರ್ಬಂಧಿತ ಗ್ರಾಹಕ ಖರ್ಚು ಮತ್ತು ಉದ್ಯೋಗ ನಷ್ಟದ ಭೀತಿಗೆ ಕಾರಣವಾಗಬಹುದು. ಕೊನೆಗೆ ಅದು ಆರ್ಥಿಕತೆಗೆ ಉತ್ತಮವಾಗದು ಎಂದಿದ್ದಾರೆ.

CVorona
ಕೊರೊನಾ

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಅವರು ಕಳೆದ ವಾರ, ದೇಶಕ್ಕೆ ಕೋವಿಡ್ -19ರ ಭವಿಷ್ಯದ ಹೆಜ್ಜೆ ನಿರ್ಧರಿಸುವಲ್ಲಿ ಮುಂದಿನ ಮೂರು ತಿಂಗಳು ನಿರ್ಣಾಯಕವಾಗಲಿವೆ ಎಂದು ಹೇಳಿದ್ದಾರೆ. ಇದು ಕೂಡ ಹೂಡಿಕೆದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

3) ಲಸಿಕೆಯ ಭರವಸೆ

ಕೊರೊನಾ ವೈರಸ್​ ಲಸಿಕೆಯ ಕ್ಲಿನಿಕಲ್ ಟ್ರಯಲ್ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ ವಿಶ್ವಾದ್ಯಂತ ಸ್ಟಾಕ್ ಮಾರುಕಟ್ಟೆಗಳು ಸಾಕಷ್ಟು ಮೆರುಗು ಪಡೆದಿವೆ. ಆದರೆ, ಲಸಿಕೆಯನ್ನು ಸುತ್ತುವರೆದಿರುವ ಆಶಾವಾದದ ಬಹುಪಾಲು ಈಗ ಮತ್ತೊಂದು ಕಾರಣವಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕಿನ ಗುಪ್ತಾ ಅವರು, ಲಸಿಕೆ ಅಭಿವೃದ್ಧಿಯ ಕುರಿತು ಮುಂದಿನ ಪ್ರಕಟಣೆ ಸ್ವಲ್ಪ ವಿಳಂಬವಾಗಲಿದೆ. ಅಲ್ಲಿನ ಯಾವುದೇ ಅಡಚಣೆಯು ಈಕ್ವಿಟಿ ಮಾರುಕಟ್ಟೆಗೆ ದೊಡ್ಡ ಅಪಾಯವೆಂದು ಸಾಬೀತುಪಡಿಸಬಹುದು ಎಂಬುದು ನನ್ನ ನಂಬಿಕೆ ಎಂದಿದ್ದಾರೆ.

Vccine
ಲಸಿಕೆ

4) ಹಣಕಾಸಿನ ಪರಿಸ್ಥಿತಿ

ಹಣಕಾಸಿನ ಕೊರತೆಯ ಈಗಿನ ಪರಿಸ್ಥಿತಿ ಕೈಗೆಟುಕುವ ಈಕ್ವಿಟಿ ಮಾರುಕಟ್ಟೆಗಳ ಮುಂದಿನ ಚಲನೆಗೆ ದೊಡ್ಡ ಅಪಾಯ ಎಂಬುದು ಸಾಬೀತು ಪಡಿಸುತ್ತಿದೆ. ಆರ್‌ಬಿಐ ಮಂಗಳವಾರ ತನ್ನ ವರದಿ ಬಿಡುಗಡೆ ಮಾಡಿದೆ. ಬಜೆಟ್ ಅಂದಾಜು ಶೇ 2.8ಕ್ಕೆ ಹೋಲಿಸಿದರೆ ಸಂಯೋಜಿತ ರಾಜ್ಯಗಳ ಹಣಕಾಸಿನ ಕೊರತೆಯು 2021ರ ಹಣಕಾಸು ವರ್ಷದಲ್ಲಿ ಶೇ 4ಕ್ಕಿಂತ ಹೆಚ್ಚಾಗಲಿದೆ ಎಂದು ಅಂದಾಜಿಸಿದೆ.

ಕಡಿತದ ಪರಿಣಾಮವಾಗಿ ಆರ್ಥಿಕ ಕುಸಿತ ಮತ್ತು ಹೆಚ್ಚಿನ ಖರ್ಚಿನ ಆದಾಯದ ನಷ್ಟವು ಹಣಕಾಸಿನ ಲೆಕ್ಕಾಚಾರದಲ್ಲಿ ಪ್ರಾಬಲ್ಯ ಸಾಧಿಸುತ್ತದೆ ಎಂದು ಆರ್‌ಬಿಐ ಹೇಳಿದೆ.

Finance
ಹಣಕಾಸು

ಪ್ರಧಾನ ಮಹಾಲೇಖ ಪಾಲಕದ (ಸಿಜಿಎ) ಮಾಹಿತಿ ಪ್ರಕಾರ, ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಭಾರತದ ಹಣಕಾಸಿನ ಕೊರತೆಯು ಕೇಂದ್ರ ಬಜೆಟ್​​ನಲ್ಲಿ ಅಂದಾಜು ಮಾಡಲಾದ ವಾರ್ಷಿಕ ಗುರಿಯ ಶೇ 109.3ರಷ್ಟಿದೆ (ಜಿಡಿಪಿಯ ಶೇ 3.5ರಷ್ಟು ಅಥವಾ 7.96 ಟ್ರಿಲಿಯನ್ ರೂ.).

ಹಣಕಾಸಿನ ಪರಿಸ್ಥಿತಿಯು ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗಳಿಗೆ ದೊಡ್ಡ ಅಪಾಯವೆಂದು ನಾವು ಪರಿಗಣಿಸುತ್ತೇವೆ. ಏಕೆಂದರೆ, ಅದು ಬೆಳವಣಿಗೆ ಮತ್ತು ಆರ್ಥಿಕ ದೃಷ್ಟಿಕೋನವನ್ನು ಅಳೆಯುತ್ತದೆ ಎಂದು ಗುಪ್ತಾ ತಿಳಿಸಿದ್ದಾರೆ.

ಆರ್ಥಿಕ ಚೇತರಿಕೆಗೆ ನೆರವಾಗಲು ಮತ್ತೊಂದು ಉತ್ತೇಜಕ ಪ್ಯಾಕೇಜ್ ಅನುಷ್ಠಾನಕ್ಕೆ ಸರ್ಕಾರ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಸುಳಿವು ನೀಡಿದ್ದಾರೆ. ಇದು ಷೇರು ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಚಲನೆಯನ್ನು ಪ್ರೇರೇಪಿಸುತ್ತದೆ.

5) ಬಿಹಾರ ಚುನಾವಣೆ

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶವು ದೇಶದಲ್ಲಿ ಹೂಡಿಕೆದಾರರ ಮನೋಭಾವದ ಮೇಲೂ ಪರಿಣಾಮ ಬೀರಬಹುದು. ಮೊದಲ ಹಂತದ ಮತದಾನ ಬುಧವಾರ ಪ್ರಾರಂಭವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಮಹಾಘಟ್​ಬಂಧನ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

Poll
ಮತದಾನ

ಐತಿಹಾಸಿಕವಾಗಿ ನೋಡಿದರೇ ಬಿಹಾರ ಚುನಾವಣೆಯಲ್ಲಿ ಆಡಳಿತಾರೂಢ ಸಮ್ಮಿಶ್ರ ಎನ್‌ಡಿಎಗೆ ಯಾವುದೇ ದೊಡ್ಡ ಹಿನ್ನಡೆ ಅಥವಾ ಮಿಶ್ರ ತೀರ್ಪು ಫಲಿತಾಂಶ ಬಂದರೇ ಷೇರು ಮಾರುಕಟ್ಟೆಗಳ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರುವುದಿಲ್ಲ. ಇದು ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣಾ ಕಾರ್ಯಸೂಚಿಯ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.