ETV Bharat / business

ಫ್ಲಿಪ್​ಕಾರ್ಟ್​ನ 2ಗುಡ್​​ ಲೋಕಲ್​ ಯೋಜನೆ ಶುರು: ಆಪ್​ಲೈನ್​ ಚಿಲ್ಲರೆ ವಸ್ತುಗಳು ಆನ್​ಲೈನ್​ನಲ್ಲೂ ಲಭ್ಯ! - 2ಗುಡ್ ಲೋಕಲ್ ಆಫರ್

ಮೌಲ್ಯಯುತ ಖರ್ಚು ಮತ್ತು ಪ್ರಯೋಜನವು ಆನ್‌ಲೈನ್ ಶಾಪಿಂಗ್​ನ ಪ್ರಮುಖ ಅಂಶವಾಗಿವೆ. ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಜನಪ್ರಿಯವಾದ ಬ್ರ್ಯಾಂಡ್‌ಗಳನ್ನು ಮಾರುಕಟ್ಟೆಯಲ್ಲಿ ಮತ್ತಷ್ಟು ಬೇಡಿಕೆ ಸೃಷ್ಟಿಸಲು ಮತ್ತು ಪ್ಯಾನ್ - ಇಂಡಿಯಾ ಮಾರುಕಟ್ಟೆಗೆ ಕೊಂಡೊಯ್ಯಲು 2ಗುಡ್​ ಲೋಕಲ್ ಪ್ರಾರಂಭಿಸಿದ್ದೇವೆ ಎಂದು 2ಗುಡ್​ ಫ್ಲಿಪ್‌ಕಾರ್ಟ್ ಮುಖ್ಯಸ್ಥ ಚಾಣಕ್ಯ ಗುಪ್ತಾ ಹೇಳಿದರು.

Flipkart
ಫ್ಲಿಪ್​ಕಾರ್ಟ್
author img

By

Published : Dec 4, 2020, 7:56 PM IST

ನವದೆಹಲಿ: ಸಾಂಪ್ರದಾಯಿಕ ಚಿಲ್ಲರೆ ವ್ಯಾಪಾರಗಳಿಗೆ ಇ - ಕಾಮರ್ಸ್‌ನ ಪ್ರಯೋಜನ ವಿಸ್ತರಿಸುವ ಗುರಿ ಹೊಂದಿರುವ ಫ್ಲಿಪ್‌ಕಾರ್ಟ್‌ನ ಇಂಡಿಪೆಂಡೆಂಟ್ ಪ್ಲಾಟ್‌ಫಾರ್ಮ್ 2ಗುಡ್​, '2ಗುಡ್​ ಲೋಕಲ್' ಯೋಜನೆ ಸೇವೆ ಪ್ರಾರಂಭಿಸಿದೆ.

2ಗುಡ್ ಲೋಕಲ್​ ಹೆಸರಿನ ಹೊಸ ಯೋಜನೆಯು ನೂತನ ಸ್ವರೂಪದ ಆಫ್‌ಲೈನ್ ಮಳಿಗೆ, ಬ್ರ್ಯಾಂಡ್‌ ಮತ್ತು ಶಾಪಿಂಗ್ ತಾಣಗಳಿಗೆ ತಂತ್ರಜ್ಞಾನದ ಪ್ರಯೋಜನಗಳನ್ನು ಒದಗಿಸಲಿದೆ. ಚಿಲ್ಲರೆ ಮಾದರಿಯ ಲಕ್ಷಾಂತರ ಸರಕುಗಳನ್ನು ಗ್ರಾಹಕರಿಗೆ ತಲುಪಿಸುವಂತಹ ಅವಕಾಶ ಮಾಡಿಕೊಡಲಿದೆ ಎಂದು ಪ್ರಕಟಣೆಯಲ್ಲಿ ಫ್ಲಿಪ್​ಕಾರ್ಟ್​ ತಿಳಿಸಿದೆ.

ಸಾಲ ಮಾಡಿ ಪರಾರಿಯಾದ ವಿಜಯ್ ಮಲ್ಯಗೆ ಮತ್ತೆ ಶಾಕ್: ಫ್ರಾನ್ಸ್​ನಲ್ಲಿನ ಆಸ್ತಿ ಇಡಿ ವಶಕ್ಕೆ

2ಗುಡ್​ ಲೋಕಲ್ ಸ್ಥಳೀಯ ಮಳಿಗೆಗಳು (ಸಿಂಗಲ್ ಬ್ರಾಂಡ್/ ಮಲ್ಟಿ-ಬ್ರಾಂಡ್ ಮಳಿಗೆಗಳು ಮತ್ತು ಇತರ ಶಾಪಿಂಗ್ ಮಾಲ್​ಗಳು) ಮತ್ತು ಚಿಲ್ಲರೆ ವ್ಯಾಪಾರಿಗಳು ತಮ್ಮ ಗ್ರಾಹಕರೊಂದಿಗೆ ಡಿಜಿಟಲ್ ಸಾಧನ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ.

2ಗುಡ್​ ಲೋಕಲ್ ಬೆಂಗಳೂರಿನ ಕೆಎಲ್ಎಂ ಫ್ಯಾಶನ್ ಮಾಲ್​ನೊಂದಿಗೆ ಪ್ರಾರಂಭವಾಗಿದೆ. 2017ರಲ್ಲಿ ಪ್ರಾರಂಭವಾದ ಕೆಎಲ್‌ಎಂ ಫ್ಯಾಶನ್ ಮಾಲ್ ಕಳೆದ ಮೂರು ವರ್ಷಗಳಲ್ಲಿ 17 ಶೋರೂಮ್‌ ಸ್ಥಾಪಿಸಿದೆ.

ಆಕರ್ಷಕವಾದ 2ಗುಡ್​​ ಲೋಕಲ್​ ಪ್ಲಾನ್​, ತನ್ನ ಪಾಲುದಾರ ಮಳಿಗೆಗಳ ಇತ್ತೀಚಿನ ಉತ್ಪನ್ನಗಳು ಹಾಗೂ ಸಂಗ್ರಹಗಳನ್ನು ಪ್ರದರ್ಶಿಸಲು ಮತ್ತು ಅವುಗಳನ್ನು ಆನ್​ಲೈನ್​ ಬಳಕೆದಾರರಿಗೆ ನೀಡಲು ಸಾಧ್ಯವಾಗುತ್ತದೆ. 2ಗುಡ್​ ಲೋಕಲ್​ ಕ್ಯಾಟಲಾಗಿಂಗ್, ಗ್ರಾಹಕ ತೃಪ್ತಿ, ಜಾಹೀರಾತು ಮತ್ತು ಮಾರುಕಟ್ಟೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಟೋರ್​ಗಳಿಗೆ ನೆರವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.