ETV Bharat / business

ಫ್ಲಿಪ್​ಕಾರ್ಟ್​ನಲ್ಲಿ ಸಿಗಲಿದೆ ನೋಕಿಯಾ ಲ್ಯಾಪ್​ಟಾಪ್: ಬೆಲೆ, ಫೀಚರ್, ಮುಂಗಡ ಬುಕ್ಕಿಂಗ್ ಹೀಗಿದೆ

ವಾಲ್​​​​​​​ಮಾರ್ಟ್​​ ಒಡೆತನದ ಫ್ಲಿಪ್‌ಕಾರ್ಟ್ ನೋಕಿಯಾ ಪ್ಯೂರ್‌ಬುಕ್ ಎಕ್ಸ್ 14 ಲ್ಯಾಪ್‌ಟಾಪ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಎಚ್‌ಪಿ, ಡೆಲ್, ಲೆನೊವೊ, ಏಸರ್ ಮತ್ತು ಆಸಿಸ್‌ನಂತಹ ದೈತ್ಯರು ಪ್ರಾಬಲ್ಯ ಹೊಂದಿರುವ ಭಾರತದ ಲ್ಯಾಪ್‌ಟಾಪ್ ಮಾರುಕಟ್ಟೆಗೆ ನೋಕಿಯಾ ಬ್ರಾಂಡ್‌ನ ಪ್ರವೇಶಿಸಲಿದೆ.

Flipkart
ನೋಕಿಯಾ ಲ್ಯಾಪ್​ಟಾಪ್​
author img

By

Published : Dec 14, 2020, 5:28 PM IST

ನವದೆಹಲಿ: ವರ್ಕ್​ ಫ್ರಮ್ ಹೋಮ್​ ಮತ್ತು ಆನ್​ಲೈನ್ ಅಧ್ಯಯನದಂತಹ ಪ್ರವೃತ್ತಿ ಹೆಚ್ಚುತ್ತಿದ್ದು, ಇದರಿಂದ ಸೃಷ್ಟಿಯಾದ ಬೇಡಿಕೆ ಪೂರೈಸಲು ಫ್ಲಿಪ್‌ಕಾರ್ಟ್ 59,990 ರೂ.ಬೆಲೆಯ ನೋಕಿಯಾ ಬ್ರಾಂಡ್ ಲ್ಯಾಪ್‌ಟಾಪ್‌ಗಳನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ.

ವಾಲ್​​ಮಾರ್ಟ್​​​ ಒಡೆತನದ ಫ್ಲಿಪ್‌ಕಾರ್ಟ್ ನೋಕಿಯಾ ಪ್ಯೂರ್‌ಬುಕ್ ಎಕ್ಸ್ 14 ಲ್ಯಾಪ್‌ಟಾಪ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಎಚ್‌ಪಿ, ಡೆಲ್, ಲೆನೊವೊ, ಏಸರ್ ಮತ್ತು ಆಸಸ್‌ನಂತಹ ದೈತ್ಯರು ಪ್ರಾಬಲ್ಯ ಹೊಂದಿರುವ ಭಾರತದ ಲ್ಯಾಪ್‌ಟಾಪ್ ಮಾರುಕಟ್ಟೆಗೆ ನೋಕಿಯಾ ಬ್ರಾಂಡ್‌ನ ಪ್ರವೇಶಿಸಲಿದೆ.

40 ದಿನಗಳಲ್ಲಿ 30 ಸಾವಿರ ಹೊಸ ಐ-20 ಕಾರ್ ಬುಕ್ಕಿಂಗ್​: 10,000 ವಿತರಣೆ

ಆನ್‌ಲೈನ್ ಶಿಕ್ಷಣ ಮತ್ತು ಮನೆಯಿಂದ ಕೆಲಸ ಮಾಡುವ ಪ್ರವೃತ್ತಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ, ಇದು ಲ್ಯಾಪ್‌ಟಾಪ್‌ಗಳ ಬೇಡಿಕೆ ಗಮನಾರ್ಹವಾಗಿ ತಂದಿದೆ. ಲಕ್ಷಾಂತರ ಗ್ರಾಹಕರ ವಿಮರ್ಶೆ ವಿಶ್ಲೇಷಣೆ ಮತ್ತು ಲ್ಯಾಪ್‌ಟಾಪ್ ಮಾರುಕಟ್ಟೆಯ ಅಧ್ಯಯನದ ಬಳಿಕ ಪ್ರೀಮಿಯಂ ಪಿಕ್ಚರ್ ಗುಣಮಟ್ಟ, ಬಹು - ಕಾರ್ಯಕ್ಷಮತೆ, ಅಲ್ಟ್ರಾ-ಲೈಟ್‌ವೈಟ್ ಮತ್ತು ನಯವಾದ ವಿನ್ಯಾಸದಂತಹ ಗುಣಲಕ್ಷಣಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.

ನೋಕಿಯಾ ಪ್ಯೂರ್‌ಬುಕ್ ಎಕ್ಸ್ 14 1.1 ಕೆ.ಜಿ ಅಲ್ಟ್ರಾಲೈಟ್ ಮತ್ತು 16.8 ಎಂಎಂ ನಯವಾದ ಫಾರ್ಮ್ - ಫ್ಯಾಕ್ಟರ್‌ನಲ್ಲಿ ಮಾರುಕಟ್ಟೆಗೆ ಬರಲಿದೆ. 14 ಇಂಚಿನ ಪೂರ್ಣ ಎಚ್‌ಡಿ ಪರದೆ ಹೊಂದಿದ್ದು, ಡಾಲ್ಬಿ ವಿಷನ್ ಮತ್ತು ಇಂಟೆಲ್ ಐ 5 10ನೇ ಜನರೇಷನ್​ನ ಕ್ವಾಡ್-ಕೋರ್ ಪ್ರೊಸೆಸರ್​ನಿಂದ ನಿಯಂತ್ರಿತವಾಗಿರುತ್ತದೆ. ಈ ಲ್ಯಾಪ್‌ಟಾಪ್ ಬಿಡುಗಡೆ ವೇಳೆ 59,990 ರೂ. ಇರಲಿದೆ. ಡಿಸೆಂಬರ್​ 18ರಂದು ಮುಂಗಡ ಬುಕ್ಕಿಂಗ್ ಆರಂಭವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.