ನವದೆಹಲಿ : ಸರ್ಕಾರದ ಸಬ್ಸಿಡಿಯ ಹೊರತಾಗಿಯೂ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ (ಇ -2 ಡಬ್ಲ್ಯೂ) ಮಾರಾಟವು ಕಳಪೆಯಾಗಿದೆ. ಮಾರುಕಟ್ಟೆ ದೃಷ್ಟಿಕೋನವು ಯಾವುದೇ ವಿಧದಲ್ಲಿ ಬದಲಾಗದೆ ಉಳಿದಿದೆ ಎಂದು ರೇಟಿಂಗ್ ಏಜೆನ್ಸಿ ಇಕ್ರಾ ತಿಳಿಸಿದೆ.
ಫೇಮ್-II ಯೋಜನೆಯ ಮೂರು ವರ್ಷಗಳ ಅಧಿಕಾರಾವಧಿಯ 2020-22ರ ನಡುವಿನ ಹಣಕಾಸು ವರ್ಷಗಳಲ್ಲಿ 2020ರ ಸೆಪ್ಟೆಂಬರ್ 30ರ ವೇಳೆಗೆ ಇ-2 ಡಬ್ಲ್ಯೂ ಮಾರಾಟವು ಉದ್ದೇಶಿತ 10 ಲಕ್ಷ ಯುನಿಟ್ನಲ್ಲಿ ಕೇವಲ 2 ಪ್ರತಿಶತದಷ್ಟಿದೆ ಎಂದು ಇಕ್ರಾ ಪ್ರಕಟಣೆಯಲ್ಲಿ ತಿಳಿಸಿದೆ.
ಎಲೆಕ್ಟ್ರಿಕ್ ವಾಹನ (ಇವಿ) ಅಳವಡಿಸಿಕೊಳ್ಳುವಂತೆ ಸರ್ಕಾರದ ಒತ್ತಡದ ಹೊರತಾಗಿಯೂ ಇತ್ತೀಚಿನ ವರ್ಷಗಳಲ್ಲಿ ಇ -2 ಡಬ್ಲ್ಯೂಗಳ ಬೇಡಿಕೆ ಮತ್ತು ಪ್ರಮಾಣ ಬಹಳ ಕುಂಠಿತವಾಗಿದೆ. ಸಾಂಕ್ರಾಮಿಕ ರೋಗದಿಂದ ಉಂಟಾದ ಬೇಡಿಕೆಯ ಆಘಾತವು 2021ರ ಹಣಕಾಸು ವರ್ಷದಲ್ಲಿ ಬದಲಾಗುವುದಿಲ್ಲ ಎಂದಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 498 ಕೋಟಿ ರೂ. ಮೌಲ್ಯದ ತೆರಿಗೆ ವಂಚನೆ ಪತ್ತೆಹಚ್ಚಿದ ಜಿಎಸ್ಟಿ ಗುಪ್ತದಳ
ನವೆಂಬರ್‌ನಲ್ಲಿ ನಡೆದ 16 ಇ-2 ಡಬ್ಲ್ಯೂ ಮಾರಾಟಗಾರರ ರಾಷ್ಟ್ರವ್ಯಾಪಿ ಸಮೀಕ್ಷೆ ಉಲ್ಲೇಖಿಸಿದ ಇಕ್ರಾ, ಕೇಂದ್ರದ ಪ್ರಮುಖ ಯೋಜನೆಯಾದ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಎರಡನೇ ಹಂತದ ವೇಗ ಮತ್ತು ಉತ್ಪಾದನೆ (ಎಫ್‌ಎಎಂಇ -2) ಅಡಿಯಲ್ಲಿ ಸಬ್ಸಿಡಿ ಪಡೆಯಲು ಕಠಿಣ ಮಾನದಂಡಗಳನ್ನು ವಿಧಿಸಲಾಗುತ್ತಿದೆ. ಮುಖ್ಯವಾಗಿ ಕನಿಷ್ಠ ಸ್ಥಳೀಕರಣ ಮತ್ತು ಸಬ್ಸಿಡಿಗಾಗಿ ಸೀಸ-ಆಮ್ಲ ಆಧಾರಿತ ಇ -2 ಡಬ್ಲ್ಯೂ ಹೊರಗಿಟ್ಟಿದ್ದು ಎಂದು ಹೇಳಿದೆ.
ಗ್ರಾಹಕರ ಅರಿವಿನ ಕೊರತೆ (ಸರ್ಕಾರದ ಸಬ್ಸಿಡಿಗೆ ಸಂಬಂಧ), ಉತ್ಪನ್ನ ಜ್ಞಾನದ ಕೊರತೆಯಿಂದಾಗಿ ಕಡಿಮೆ ಆರ್ಡರ್ ಮತ್ತು ಮಾರಾಟದ ನಂತರದ ಸೇವೆಯ ಕಾಳಜಿಗಳು ಯೋಜನೆಯ ಕಳಪೆ ಕಾರ್ಯಕ್ಷಮತೆಗೆ ಮತ್ತೊಂದು ಪ್ರಮುಖ ಕಾರಣಗಳಾಗಿವೆ ಎಂದು ಸೂಚಿಸಿದೆ.
ಎಲೆಕ್ಟ್ರಿಕ್ ವೆಹಿಕಲ್ನತ್ತ (ಇವಿ) ತಳ್ಳುವ ಗುರಿ ಇರಿಸಿಕೊಂಡಿರುವ ಫೇನ್-II, 2020ರ ಸೆಪ್ಟೆಂಬರ್ 30ರಂದು ತನ್ನ ಮೂರು ವರ್ಷಗಳ ಅಧಿಕಾರಾವಧಿಯ (2020-2022ರ ಹಣಕಾಸು ವರ್ಷಗಳು) ಅರ್ಧದಷ್ಟು ದಾಟಿದೆ. ಈ ಅವಧಿಯಲ್ಲಿ ತನ್ನ ಗುರಿಯ ಶೇ.2ರಷ್ಟು (10 ಲಕ್ಷ ಇ -2 ಡಬ್ಲ್ಯೂ ಸೇರಿ) ಮಾತ್ರವೇ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಇಕ್ರಾ ಹೇಳಿದೆ.