ನವದೆಹಲಿ: ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಬ್ಯಾಂಕ್ಗಳಲ್ಲಿ ಉಂಟಾಗಿರುವ ಆರ್ಥಿಕ ಕುಸಿತ ತಪ್ಪಿಸುವ ನಿಟ್ಟಿನಿಂದ ಈ ಸಲದ ಬಜೆಟ್ನಲ್ಲಿ 35,500 ರಿಂದ 40,000 ಕೋಟಿ ರೂ.ಗಳ ಬ್ಯಾಂಕ್ ಮರು ಬಂಡವಾಳೀಕರಣ ಯೋಜನೆ ಪ್ರಕಟಿಸುವ ಸಾಧ್ಯತೆ ಇದೆ.
ಮಹಾಮಾರಿ ವೈರಸ್ನಿಂದ ಬ್ಯಾಂಕ್ಗಳಲ್ಲಿ ನಿಷ್ಕ್ರಿಯ ಆಸ್ತಿ ಹಾಗೂ ಕೆಟ್ಟ ಸಾಲಗಳು ಏರಿಕೆಯಾಗಿದ್ದು, ಅದನ್ನ ತಡೆದು ಹಾಕುವ ಉದ್ದೇಶದಿಂದ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಾರೆ.
ಓದಿ: ಬಜೆಟ್ನಲ್ಲಿ R&D ನಿಧಿ ಸ್ಥಾಪಿಸಿ, ರಿಯಾಯಿತಿ ಸಾಲ ಯೋಜನೆ ಘೋಷಿಸಿ: ನಿರ್ಮಲಾಗೆ ರಫ್ತುದಾರರ ಒತ್ತಾಯ
ಈಗಾಗಲೇ ಸರ್ಕಾರ ಬಿಡುಗಡೆ ಮಾಡಿರುವ ಜಿಡಿಪಿ ಬೆಳವಣಿಗೆ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆ ಶೇ.8ರಷ್ಟು ಕುಗ್ಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಬಗ್ಗೆ ಮಾತನಾಡಿರುವ ಕೇರ್ ರೇಟಿಂಗ್ಸ್ನ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್, ಬ್ಯಾಂಕ್ ಮರು ಬಂಡವಾಳೀಕರಣದ ಯೋಜನೆ ನಿರೀಕ್ಷೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಆದರೆ ಬ್ಯಾಂಕ್ ಮರು ಬಂಡವಾಳೀಕರಣ ಯೋಜನೆ ಸರ್ಕಾರ ಜಾರಿಗೆ ತರುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇದರ ಬದಲಾಗಿ ಬಂಡವಾಳ ಸಂಗ್ರಹಣೆಗೋಸ್ಕರ ಬ್ಯಾಂಕ್ಗಳಿಗೆ ಬಾಂಡ್ ನೀಡಬಹುದು. ರಿಸರ್ವ್ ಬ್ಯಾಂಕ್ನ ಅಂದಾಜಿನ ಪ್ರಕಾರ, ಈ ವರ್ಷದ ಸೆಪ್ಟೆಂಬರ್ ವೇಳೆಗೆ ಕೆಟ್ಟ ಸಾಲ ಶೇ.15ರಷ್ಟು ಆಗಬಹುದು ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣ ಸಣ್ಣ ಮತ್ತು ಮಧ್ಯಮ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೊಳಗಾಗಿರುವುದು ಎನ್ನಲಾಗಿದೆ.