ETV Bharat / business

ಮಾರುಕಟ್ಟೆ ವಹಿವಾಟುದಾರರ ಗಮನಕ್ಕೆ! ಸೀಮಿತ ಅವಧಿ ವಹಿವಾಟು ಮುಂದೂಡಿಕೆ - ವಾಣಿಜ್ಯ ಸುದ್ದಿ

ಕೋವಿಡ್ -19 ಸೃಷ್ಟಿಯಾದ ಅಪಾಯಕಾರಿ ಪರಿಸ್ಥಿತಿಯಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಏಪ್ರಿಲ್ 7 ರಿಂದ 17ರವರೆಗೆ ವಿವಿಧ ಹಣಕಾಸು ಮಾರುಕಟ್ಟೆಗಳ ಸಮಯವನ್ನು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಂದು ಪರಿಷ್ಕರಿತ್ತು. ಈಗ ಈ ಸಮಯವನ್ನು ಏಪ್ರಿಲ್​ 30ರ ತನಕ ವಿಸ್ತರಿಸಿದೆ.

Reserve Bank of India
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
author img

By

Published : Apr 16, 2020, 6:04 PM IST

ಮುಂಬೈ: ದೇಶಾದ್ಯಂತದ ಲಾಕ್‌ಡೌನ್ ವಿಸ್ತರಣೆಯ ಮಧ್ಯೆಯೂ ಕ್ರೆಡಿಟ್ ಮತ್ತು ಕರೆನ್ಸಿ ಮಾರುಕಟ್ಟೆಯ ಸೀಮಿತ ವಹಿವಾಟು ಏಪ್ರಿಲ್ 30ರವರೆಗೆ ಮುಂದುವರಿಯಲಿದೆ ಎಂದು ಆರ್‌ಬಿಐ ತಿಳಿಸಿದೆ.

ಕೋವಿಡ್ -19 ಸೃಷ್ಟಿಯಾದ ಅಪಾಯಕಾರಿ ಪರಿಸ್ಥಿತಿಯಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಏಪ್ರಿಲ್ 7 ರಿಂದ 17ರವರೆಗೆ ವಿವಿಧ ಹಣಕಾಸು ಮಾರುಕಟ್ಟೆಗಳ ಸಮಯವನ್ನು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಂದು ಪರಿಷ್ಕರಿತ್ತು. ಈಗ ಈ ಸಮಯವನ್ನು ಏಪ್ರಿಲ್​ 30ರ ತನಕ ವಿಸ್ತರಿಸಿದೆ.

2020ರ ಮೇ 3ರವರೆಗೆ (ಭಾನುವಾರ) ಲಾಕ್‌ಡೌನ್ ಜಾರಿಯಲ್ಲಿರುತ್ತದೆ ಎಂಬ ಕೇಂದ್ರ ಸರ್ಕಾರದ ಆದೇಶವನ್ನು ಗಮನದಲ್ಲಿಟ್ಟುಕೊಂಡು ಸೀಮಿತ ಅವಧಿಯನ್ನು ಸಹ ವಿಸ್ತರಿಸಲಾಗಿದೆ. ಆರ್‌ಬಿಐ, ನಿಯಂತ್ರಿತ ಮಾರುಕಟ್ಟೆಗಳ ವಹಿವಾಟಿನ ಸಮಯವು ಈ ಹಿಂದಿನ ಆದೇಶದ ಅವಧಿಯಂತೆ ಮುಂದುವರಿಯುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪರಿಷ್ಕೃತ ಸಮಯದ ಪ್ರಕಾರ, ಆರ್‌ಬಿಐ ನಿಯಂತ್ರಿತ ಮಾರುಕಟ್ಟೆ ಈ ಹಿಂದಿನ 9ಕ್ಕೆ ಬದಲಾಗಿ ಬೆಳಗ್ಗೆ 10 ಗಂಟೆಗೆ ತೆರೆಯುತ್ತದೆ. ಮುಕ್ತಾಯದ ಸಮಯ ಮಧ್ಯಾಹ್ನ 2 ಗಂಟೆಗೆ ಪರಿಷ್ಕರಿಸಲಾಗಿದೆ. ಲಾಕ್‌ಡೌನ್ ಹಣಕಾಸು ಮಾರುಕಟ್ಟೆಗಳ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿದೆ.

ಕರೆ/ಸೂಚನೆ/ಅವಧಿ ಹಣ, ಸರ್ಕಾರಿ ಭದ್ರತೆಗಳ ಮಾರುಕಟ್ಟೆ ರೆಪೊ, ಸರ್ಕಾರಿ ಭದ್ರತೆಗಳ ತ್ರಿಪಕ್ಷೀಯ ರೆಪೊ, ವಾಣಿಜ್ಯ ಕಾಗದ ಮತ್ತು ಠೇವಣಿ ಪ್ರಮಾಣಪತ್ರಗಳು, ಕಾರ್ಪೊರೇಟ್ ಬಾಂಡ್‌ಗಳ ರೆಪೊ, ಸರ್ಕಾರಿ ಭದ್ರತೆಗಳು, ವಿದೇಶಿ ಕರೆನ್ಸಿ/ಭಾರತೀಯ ರೂಪಾಯಿ ವಹಿವಾಟುಗಳಿಗೆ ಸಮಯ ಪರಿಷ್ಕರಿಸಲಾಗಿದೆ. ಆರ್‌ಟಿಜಿಎಸ್, ಎನ್‌ಇಎಫ್‌ಟಿ, ಇ-ಕುಬರ್ ಮತ್ತು ಇತರ ಚಿಲ್ಲರೆ ಪಾವತಿ ವ್ಯವಸ್ಥೆಗಳು ಸೇರಿ ಗ್ರಾಹಕರಿಗೆ ಎಲ್ಲ ನಿಯಮಿತ ಬ್ಯಾಂಕಿಂಗ್ ಸೇವೆಗಳು ಈಗಿರುವ ಸಮಯದ ಪ್ರಕಾರ ಲಭ್ಯವಾಗಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.