ಮುಂಬೈ: ಕಳೆದ ಶುಕ್ರವಾರ ಭಾರಿ ಕುಸಿತದ ನಂತರ ಮತ್ತೆ ಮಾರುಕಟ್ಟೆಯ ಪ್ರಾರಂಭದಲ್ಲಿ ಸೆನ್ಸೆಕ್ಸ್ 1,600 ಅಂಕಗಳನ್ನು ಕಳೆದುಕೊಂಡರೆ, ನಿಫ್ಟಿ 450 ಅಂಕಗಳ ಕುಸಿತ ಕಂಡಿದೆ.
30 ಷೇರುಗಳ ಸೂಚ್ಯಂಕವು 1,612 ಅಂಕ ಅಥವಾ ಶೇ. 4.73 ರಷ್ಟು ಕುಸಿತ ಕಂಡು, 32,490 ಕ್ಕೆ ತಲುಪಿದೆ.
BSE(ಬಾಂಬೆ ಷೇರು ಮಾರುಕಟ್ಟೆ) ಸೆನ್ಸೆಕ್ಸ್ 1,325.34 ಪಾಯಿಂಟ್ ಅಥವಾ 4.69 ರಷ್ಟು ಹೆಚ್ಚಳವಾಗಿ 34,103.48ರಲ್ಲಿ ವಹಿವಾಟು ನಡೆಸುತ್ತಿದ್ದು, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ NSE ನಿಫ್ಟಿ 9,955.20 ಕ್ಕೆ ವಹಿವಾಟು ನಡೆಸುತ್ತಿದ್ದು, ಹಿಂದಿನ ದಿನದ ಮುಕ್ತಾಯದಲ್ಲಿ 365.05 ಅಂಕಗಳ ಹೆಚ್ಚಳವಾಗಿದೆ.