ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿಪಡಿಸಿದ ರೆಪೋ ದರಕ್ಕೆ ಅನುಸಾರವಾಗಿ ಎಲ್ಲ ಬ್ಯಾಂಕ್ಗಳೂ ತಮ್ಮ ಗ್ರಾಹಕರಿಗೆ ನೀಡಿದ್ದ ಚಿಲ್ಲರೆ ಸಾಲಗಳು ಹಾಗೂ ಸಣ್ಣ ಮತ್ತು ಮಧ್ಯಮವಲಯದ ಉದ್ಯಮಿಗಳ ಸಾಲಗಳ ಮೇಲೆ ಬಡ್ಡಿದರ ಸ್ವಯಂಚಾಲಿತವಾಗಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಆರ್‌ಬಿಐ ಸೂಚಿಸಿದೆ.
ಆರ್ಬಿಐನ ಈ ಸೂಚನೆಯು ಅಕ್ಟೋಬರ್ 1ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಮನೆ, ಅಪಾರ್ಟ್ಮೆಂಟ್, ಬೈಕ್, ಕಾರು ಸೇರಿದಂತೆ ವಾಹನಗಳ ಮೇಲಿನ ಬಡ್ಡಿ ದರದಲ್ಲಿ ಇಳಿಕೆ ಆಗಲಿದೆ. ಈ ವರ್ಷದಲ್ಲಿ ಆರ್‌ಬಿಐ 110 ಬೇಸಿಸ್ ಪಾಯಿಂಟ್ಸ್ಗಳಷ್ಟು ದರ ಕಡಿಮೆ ಮಾಡಿದೆ. ಕಳೆದ 6 ವರ್ಷಗಳಲ್ಲಿ ಈ ತ್ರೈಮಾಸಿಕದ್ದು ಕನಿಷ್ಠ ಮಟ್ಟದಲ್ಲಿದೆ.
ಅಕ್ಟೋಬರ್ 1 ರಿಂದ ಬ್ಯಾಂಕ್ಗಳು ತಮ್ಮ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ನಲ್ಲಿ (ಎಂಸಿಎಲ್ಆರ್) ಬದಲಾವಣೆ ಮಾಡಿಕೊಳ್ಳಲಿವೆ. ಸಾಲಗಾರರ ಕ್ರೆಡಿಟ್ ವಿವರಕ್ಕೆ ಅನುಗುಣವಾಗಿ ಸಾಲದಾತರು ನಿರ್ಧರಿಸುವ ಪ್ರೀಮಿಯಂ ಶುಲ್ಕಗಳನ್ನು ಆರ್‌ಬಿಐ ಬಿಟ್ಟಿದೆ.